ಕಲಬುರಗಿ: ಸನ್ಯಾಸಿಯೊಬ್ಬರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತಿರುವುದು ಸ್ವಾರಸ್ಯಕರವಾಗಿದ್ದರೂ ಸನ್ಯಾಸ ಪದಕ್ಕೆ ಯುನಿವರ್ಸ್ ಲ್ ಎಂಬ ಅರ್ಥವಿದೆ. ಅದರಂತೆ ಸ್ವಾಮಿ ವಿವೇಕಾನಂದ ಮತ್ತು ಅವರ ಬದುಕು ವಿಶ್ವದ ಬೆಳಕಾಗಿದೆ ಎಂದು ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಮಂಗಳವಾರ ಸಂಜೆ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸ್ವಾಮಿ ವಿವೇಕಾನಂದರು ಯುವಕರ ಐಕಾನ್ ಎಂದು ಬಣ್ಣಿಸಿದರು.
ಮುಸ್ಲಿಂ ದೇಹ, ವೇದಾಂತದ ಮೆದುಳು ಇರಬೇಕು ಎಂದು ಹೇಳಿತ್ತಿದ್ದ ವಿವೇಕಾನಂದರು ತಮ್ಮ ಕಡಿಮೆ ಜೀವಿತಾವಧಿಯಲ್ಲಿಯೇ ಮಹತ್ವವಾದುದನ್ನು ಸಾಧಿಸಿದರು. ದೇವರು-ಧರ್ಮದ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ನೀಡಿದ ವಿವೇಕಾನಂದ ಅವರನ್ನು ‘ಗುರುವಿನ ಗುರು’ ಎಂದು ಕರೆದಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೆ ಮಾದರಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳಾದವರು ಉತ್ತಮ
ಶಿಕ್ಷಣ ಪಡೆದು ಗುರುವನ್ನು ಮೀರಿಸಿ ಬೆಳೆಯಬೇಕು ಎಂದು ಹೇಳಿದರು.
ಪ್ರಗತಿಪರ ಚಿಂತಕ ಶಿವಾನಂದ ಅಣಜಗಿ, ಸರ್ಕಾರಿ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಅಶ್ವಿನಿ ಹಡಪದ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ ಮಾತನಾಡಿ, ಗುಡಿಸಲಲ್ಲಿ ಮಾತ್ರ ಪ್ರತಿಭೆ ಹುಟ್ಟುವುದು. ಈ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವದ ಬೆಳಕು ಎಂದು ವಿವರಿಸಿದರು. ಕುಸುಮಾಕರ ಬಿರಾಳ ಸ್ವಾತಿಸಿ ನಿರೂಪಿಸಿದರು.