ಆಳಂದ: ಆಳಂದನಲ್ಲಿ ನಡೆದ ಜಾಥಾ ಕಾಂಗ್ರೆಸ್ ಜಾಥಾವೇ ಆಗಿತ್ತು ಅದನ್ನು ಶಾಸಕರು ಸರಿಯಾಗಿಯೇ ಹೇಳಿದ್ದಾರೆ ಆದರೆ ರೈತರ ಹೆಸರಿನಲ್ಲಿ ರಾಜಕೀಯ ಮಾಡುವವರು ಅದು ಒಂದು ರೈತ ಹೋರಾಟವಾಗಿತ್ತು ಎಂದು ಸಮರ್ಥಿರ್ಸಿಕೊಳ್ಳುತ್ತಿದ್ದಾರೆ ಎಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ತಿರುಗೇಟು ನೀಡುತ್ತಿದ್ದಾರೆ.
ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹಣಮಂತ ಭೂಸನೂರ ಅವರ ಹೇಳಿಕೆಯನ್ನು ಟೀಕಿಸಿರುವ ಅವರು, ಶಾಸಕರು ಅಲ್ಲಿ ಆಗಿರುವ ಸತ್ಯಾಂಶವನ್ನೇ ಹೇಳಿದ್ದಾರೆ ಅಲ್ಲಿ ಸೇರಿದ್ದವರು ಎಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಆಗಿದ್ದರೂ ಅದಕ್ಕೆ ರೈತ ಹೋರಾಟದ ಮುಖವಾಡ ಹಾಕಲಾಗಿತ್ತು ಎಂದು ಹೇಳಿದ್ದಾರೆ.
ಹಣಮಂತ ಭೂಸನೂರ ಕಲಬುರಗಿಯ ನಿವಾಸಿಗಳಾಗಿದ್ದು ಅವರ ಮೂಲ ಕಡಗಂಚಿ ಆಗಿದೆ ಆದರೂ ಅವರನ್ನು ಮಾದನ ಹಿಪ್ಪರ್ಗಾ ಬ್ಲಾಕ್ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿದ್ದಾರೆ ಇಲ್ಲಿಯೇ ಗೊತ್ತಾಗುತ್ತದೆ ಅವರಿಗೆ ತಾಲೂಕಿನ ಇತಿಹಾಸ, ರಾಜಕೀಯ ಎಷ್ಟು ಗೊತ್ತಿದೆ ಎಂದು ಹೀಗಾಗಿ ತಾಲೂಕಿನ ಜನತೆ ಅವರ ಹೇಳಿಕೆಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಸುಭಾಷ್ ಆರ್ ಗುತ್ತೇದಾರರು ನಾಲ್ಕು ಬಾರಿ ಶಾಸಕರಾಗಿದ್ದಾರೆ ಅವರಿಗೆ ಯಾವ ವಿಷಯಕ್ಕೆ, ಎಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಗೊತ್ತಿದೆ. ದೇಶದಲ್ಲಿರುವ ಗಂಭೀರ ಸಮಸ್ಯೆಗಳಿಗೆ ಕಾಂಗ್ರೆಸ್ ನೇರ ಹೊಣೆಯಾಗಿದೆ ಬಿಜೆಪಿ ಸರ್ಕಾರ ಬಂದ ಮೇಲೆ ಒಂದೊಂದು ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೇಂದ್ರಿಕರಿಸಿದೆ ಎಂದು ಆನಂದರಾವ ಪಾಟೀಲ ಪತ್ರಿಕೆಗಳಿಗೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.