ಸುರಪುರ: ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಲಹೆ ನೀಡಿದಂತೆ ಇಂದು ಪ್ರಥಮ ಆದ್ಯತೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡಿ ಪ್ರಥಮ ಲಸಿಕೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡಲಾಗುತ್ತಿದೆ ಎಂದು ನಗರ ನೀರು ಸರಬರಾಜು iತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಕರೋನಾ ಲಸಿಕೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊವೀಡ್ ಶೀಲ್ಡ ಮತ್ತು ಕೋವಾಕ್ಸಿನ್ ಎಂಬ ಎರಡು ಬಗೆಯ ಲಸಿಕೆಗಳನ್ನು ನೀಡಲಾಗುತ್ತಿದೆ ಮೂದಲ ಹಂತದಲ್ಲಿ ಆರೋಗ್ಯ ಇಲಾಖೆಯ ೩೬೦ ಸಿಬ್ಬಂದಿಗಳಿಗೆ, ೩೯೦ ಆಶಾಕಾರ್ಯಕರ್ತರಿಗೆ, ೯೨೮ ಅಂಗನವಾಡಿ ಕಾರ್ಯಕರ್ತರು ಮತ್ತು ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ ಮತ್ತು ಎರಡನೆ ಹಂತದಲ್ಲಿ ಕಂದಾಯ ಇಲಾಖೆ, ನಗರಸಭೆ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ ಇಲಾಖೆ ನೀಡಲಾಗುವುದು ಎಂದು ತಿಳಿಸಿದರು.
ನಂತರ ವ್ಯದ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ ಮೂದಲಹಂತದಲ್ಲಿ ೫೦ ವರ್ಷ ಮೇಲ್ಪಟ್ಟವರಿಗೆ, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಇದ್ದವರಿಗೆ ನೀಡುತ್ತಿಲ್ಲ ಈಗಾಗಲೆ ಸರ್ಕಾರದಿಂದ ೧೦ ಡೋಸ ವೈಲಗಳು ತಾಲೂಕಿಗೆ ಲಭ್ಯವಾಗಿವೆ ಇನ್ನುಳಿದವು ಮುಂದಿನದಿನಗಳಲ್ಲಿ ಸರ್ಕಾರ ಒದಗಿಸುತ್ತದೆ. ತಾಲೂಕಿನಲ್ಲಿ ಮೂದಲಿಗೆ ಎರಡುಕಡೆಗಳಲ್ಲಿ ಲಸಿಕೆ ನೀಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಸೋಮವಾರ ಹುಣಸಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು ಮತ್ತು ಲಸಿಕೆ ಹಾಕಿಕೊಂಡ ನಂತರ ಅರ್ಧಗಂಟೆ ಲಸಿಕೆನೀಡಿದವರಿಗೆ ನಿಗಾಘಟಕದಲ್ಲಿರಿಸಲಾಗುವುದು ನಂತರ ಎರಡನೇ ಡೋಸ್‌ನ್ನು ೨೮ ದಿನಗಳ ನಂತರ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಮೂದಲಿಗೆ ಸಂಗಮೇಶ ಹೊಸೂರ ಅವರಿಗೆ ಲಸಿಕೆ ನೀಡಲಾಯಿತು. ಡಾ.ಹರ್ಷವರ್ಧನ ರಫಗಾರ, ಅಲ್ಪಸಂಖ್ಯಾತ ಇಲಾಖೆಯ ಸಂಗೀತಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನಿತರರಿದ್ದರು.