ಆಶಿಕ್ ಮುಲ್ಕಿ ಅವರ ‘ಗೀಚಿಟ್ಟೆ’ ಕವನ ಸಂಕಲನ ಲೋಕಾರ್ಪಣೆ

0
103

ಬೆಂಗಳೂರು: ಪತ್ರಕರ್ತ ಆಶಿಕ್ ಮುಲ್ಕಿಯವರ ಚೊಚ್ಚಲ ಕವನ ಸಂಕಲನ ‘ಗೀಚಿಟ್ಟೆ’ ಇಂದು ಸಂಸ ಬಯಲು ರಂಗ ಮಂದಿರದಲ್ಲಿ ಲೋಕಾರ್ಪಣೆ ಗೊಂಡಿತು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಮಾಧ್ಯಮ ಲೋಕದಲ್ಲಿ ಗೀಚಿಟ್ಟೆ ಕವನ ಸಂಕಲವನ್ನು ರೂಪಿಸಿರುವ ಆಶಿಕ್ ಮುಲ್ಕಿಗೆ ಅಭಿನಂದಿಸಿದರು.

Contact Your\'s Advertisement; 9902492681

ಮುಲ್ಕಿ ಪತ್ರಕರ್ತರಾಗಿ ಸೇಕೆಂಡ್ ಲೆಕ್ಕದಲ್ಲಿ ಕೇಲಸ ಮಾಡಿ ಹಲವು ಒತ್ತಡಗಳ ನಡುವೆಯೂ ಒಂದು ಕವನ ಸಂಕಲನ ಬರೆದು ತನ್ನನಲ್ಲಿದ  ಪ್ರೀತಿಯನ್ನು ಹೊರಹಾಕಿ ಎಲ್ಲರ ಮನಸ್ಸು ಗೆಲುವಂತ ಪ್ರಯತ್ನ ಲೇಖಕ ಪುಸ್ತಕದಲ್ಲಿ ಮಾಡಿದಾನೆ ಎಂದರು.

ವೃತಿಯ ಒತ್ತಡಗಳ ನಡುವೆ ಕಳೆದು ಹೋಗದ ಆಶಿಕ್, ಅವನ ಭಾವನೆ, ವಿಚಾರ, ಅವನಲ್ಲಿದ ಪ್ರೀತಿಯನ್ನು ಹೋರಹಾಕುವ ಪ್ರಯತ್ನ ತಾನು ಬರೆದ ಗೀಚಿಟ್ಟೆ ಪುಸ್ತಕದಲ್ಲಿ ಮಾಡಿರುವು ಸಾಮಾನ್ಯವಲ್ಲ ಎಂದು ಬಣಿಸಿದರು.

ಇದಕ್ಕೂ ಮುನ್ನ ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರಕರ್ತ ಸಮೀವುಲ್ಲ ಅವರು ಮಾತನಾಡಿ ಲೇಖಕ ಆಶಿಕ್ ಅವರ ವ್ಯಕ್ತಿತ್ವ, ಸಂಕೋಚ ಹಾಗೂ ಗುಣಗಳನ್ನು ಸಭಿಕರಿಗೆ ಪರಿಚಯಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಲೇಖಕರ ತಾಯಿ ಆಯಿಷಾ ಅಬು, ಮಂಜು ಬಶೀರ್, ಶರೀಫ್ ಮುಲ್ಕಿ, ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು,  ಬದುಕು ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಬಳಗ ಸೇರಿದಂತೆ ಮುಂತಾದ ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here