ಅಭಿವೃದ್ಧಿ ಹೆಸರಲ್ಲಿ ಮೃತ್ಯುಕೂಪ ನಿರ್ಮಿಸಿದ ಪುರಸಭೆ: 82 ಲಕ್ಷದ ಅಂಬೇಡ್ಕರ್ ಭವನ ನನೆಗುದಿಗೆ

0
45

ಕಲಬುರಗಿ: ವಾಡಿ ಪಟ್ಟಣದ ಭೀಮ ನಗರದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಮುಂದಾದ ಅಧಿಕಾರಿಗಳು, ಮೃತ್ಯುಕೂಪವೇ ನಿರ್ಮಿಸುವ ಮೂಲಕ ದಲಿತರನ್ನು ಜೀವ ಭಯಕ್ಕೆ ತಳ್ಳಿದ್ದಾರೆ. ಬಡಾವಣೆಯಲ್ಲಿ ಬೃಹತ್ ಕಂದಕ ನಿರ್ಮಿಸಿದ್ದರಿಂದ ಮಕ್ಕಳು ಮತ್ತು ವಯಸ್ಕರರು ಏಳುಬೀಳು ಕಾಣುವಂತಾಗಿದೆ.

ಡಾ.ಬಿ.ಆರ್.ಅಂಬೇಡ್ಕರರು ತಮ್ಮ ಜೀವಿತಾವಧಿಯಲ್ಲೊಮ್ಮೆ ನಿಜಾಮ ಸರಕಾರ ಹೈದಾರಾಬಾದಿನಲ್ಲಿ ಏರ್ಪಡಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ರೈಲು ಮೂಲಕ ಹೊರಟಾಗ ಕೆಲ ಸಮಯ ಬಂದು ಸ್ಥಳೀಯರೊಂದಿಗೆ ಮಾತನಾಡಿ ಹೋಗಿದ್ದಾರೆ ಎಂಬ ಐತಿಹಾಸಿಕ ಕುರುಹು ಹೊಂದಿರುವ ವಾಡಿ ಪಟ್ಟಣದಲ್ಲಿ ಏಳು ದಶಕಗಳ ನಂತರ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದ್ದು, ಪುರಸಭೆ ಅಧಿಕಾರಿಗಳ ಹಾಗೂ ಸಂಬಂಧಿಸಿದ ಗುತ್ತಿಗೆದಾರನ ನಿರ್ಲಕ್ಷಕ್ಕೆ ಗುರಿಯಾಗಿ ಯೋಜನೆ ವರ್ಷದಿಂದ ನನೆಗುದಿಗೆ ಬಿದ್ದಿದೆ. ಬಡಾವಣೆಯಲ್ಲಿ ಬಗೆಯಲಾಗಿರುವ ಭಾರಿ ಗಾತ್ರದ ಕಂದಕದಿಂದಾಗಿ ಭೀಮ ನಗರದ ದಲಿತ ಕುಟುಂಬಳು ಪ್ರಾಣಾಪಾಯ ಎದುರಿಸುತ್ತಿವೆ.

Contact Your\'s Advertisement; 9902492681

೨೦೧೬/೧೭ನೇ ಸಾಲಿನ ಎಸ್‌ಸಿಎಸ್‌ಟಿಪಿ ಅನುದಾನದಲ್ಲಿ ಒಟ್ಟು ೮೨ ಲಕ್ಷ ರೂ. ವ್ಯಚ್ಚದಡಿ ಭವನ ನಿರ್ಮಿಸಲು ಶಾಸಕ ಪ್ರಿಯಾಂಕ್ ಖರ್ಗೆ ಒಪ್ಪಿಗೆ ಸೂಚಿಸಿದ್ದರು. ೨೦೧೯ರ ಜನೇವರಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ನೂರಾರು ದಲಿತ ಕುಟುಂಬಗಳು ವಾಸಿಸುವ ಬಡಾವಣೆಯಲ್ಲಿ ಮೃತ್ಯುಕೂಪದಂತೆ ಮಲಗಿಕೊಂಡಿರುವ ಈ ಕಂದಕ ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. ಜೇಸಿಬಿ ಯಂತ್ರದ ಮೂಲಕ ಮಣ್ಣು ಬಗೆದಾಗ ಅಕ್ಕಪಕ್ಕದ ಮನೆಗಳು ಶಿಥಿಲಗೊಂಡಿವೆ.

ಸಾರ್ವಜನಿಕರು ನಡೆದಾಡಲು ಕಷ್ಟವಾಗುತ್ತಿದೆ. ಸುರಕ್ಷತೆಯಿಲ್ಲದ ಗುಂಡಿಯಲ್ಲಿ ಮಕ್ಕಳು ಬಿದ್ದು ಗಾಯಗೊಳ್ಳುತ್ತಿವೆ. ದೀರ್ಘ ಕಾಲ ನಿರ್ಲಕ್ಷ್ಯಕ್ಕೊಳಗಾಗಿರುವ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರನನ್ನು ಹಾಗೂ ಬೇಜವಾಬ್ದಾರಿ ತೋರಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬೌದ್ಧ ಸಮಾಜದ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here