ನಗುವೇ ಜೀವನ: ಶರಣಗೌಡ ಕಂದಕೂರ

0
22

ಯಾದಗಿರಿ :ನಗು ಮನುಷ್ಯನಿಗೆ ದೇವರಿಂದ ಬಂದ ವರದಾನ, ಜೀವನೆಂಬ ಸಂಸಾರ ಸಾಗರ ದಾಟಲು ನಗುವೊಂದು ಹರಿಗೋಲು ಇದ್ದಂತೆ,ಬಸವಳಿದ ಮನಸ್ಸಿಗೆ ನಗುವೇ ಒಂದು ಟಾನಿಕ್ ಇದ್ದಂತೆ ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿದರು.

ಮಾತೋಶ್ರೀ ಬಸಮ್ಮ ಶರಬಣ್ಣ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗೀರಿಯವರ ವತಿಯಿಂದ ನಗರದ ಸಹರಾ ಕಾಲೊನಿಯಲ್ಲಿರುವ ಬೀಚಿ ಉದ್ಯಾನ ವನದಲ್ಲಿ ಹಮ್ಮಿಕೊಂಡಿರುವ ಹಾಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಾದ ಶಂಕರಗೌಡ ಸೋಮನಾಳ ಮಾತನಾಡಿ ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ಸಂಶೋಧನೆಗಳಿಂದ ಇತ್ತೀಚೆಗೆ ಸಾಬೀತಾಗಿದೆ,ಆದ್ದರಿಂದ ದೊಡ್ಡ ದೊಡ್ಡ ನಗರಗಳಲ್ಲಿ ಹಾಸ್ಯ ಸಿಂಚನ ಮೂಡಿಸುವ ಬರಹಗಳು ಕಣ್ಣಿಗೆ ಕಂಡು ಕಚಗುಳಿ ಇಟ್ಟಂತಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಚ್.ವಿಜಯ ಭಾಸ್ಕರ್ ಅವರು ರಚಿಸಿರುವ ಇಬ್ಬರೂ ಪ್ರಚಂಡ ಪ್ರವಾದಿಗಳು ಮತ್ತು ಇಬ್ಬರು ಕುಷ್ಟರೋಗಿಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ನಿವೃತ್ತ ಪ್ರಾಂಶುಪಾಲರಾದ ವಿಜಯರತ್ನ ಕುಮಾರ ಈ ಕೃತಿಯಲ್ಲಿ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿರುವ ಹಲವಾರು ಅಂಶಗಳು ಎದ್ದು ಕಾಣುತ್ತಿವೆ. ಜೊತೆಗೆ ಒಬ್ಬ ಸಾಹಿತಿಯ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿರಬೇಕು ಎಂಬುದನ್ನು ಈ ಕೃತಿ ಸಾಬೀತುಪಡಿಸಿದಂತಾಗಿದೆ ಎಂದು ಕೃತಿಯ ಕುರಿತು ಸುದೀರ್ಘವಾಗಿ ಮಾತನಾಡಿದರು.

ನಂತರ ಜರುಗಿದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಉದಯ ಟಿವಿ ಹರಟೆ ಖ್ಯಾತಿಯ ಶ್ರೀಮತಿ ಇಂದುಮತಿ ಸಾಲಿಮಠ,ಹಾಗೂ ಎರಡಕ್ಷರ ಖ್ಯಾತಿಯ ಬಸವರಾಜ್ ಬೆಣ್ಣಿ,ಜವಾರಿ ಹಾಸ್ಯ ಖ್ಯಾತಿಯ ಕಲಬುರಗಿ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಿತು.ಸಭಿಕರೆಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.ನಂತರ ಜರುಗಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಅಮೂಲ್ಯ ಹಾಗೂ ಸಂಗಡಿಗರಿಂದ ಸಮೂಹ ನೃತ್ಯ ಹಾಗೂ ಮರೆಪ್ಪ ಶಿರವಾಳ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು.ಇದೇ ಸಂದರ್ಭದಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸಿರುವ ಹಲವಾರು ಜನರನ್ನು ಗುರುತಿಸಿ ಗೌರವಿಸಿ ಸತ್ಕರಿಸಲಾಯಿತು.

ಈ ಸಮಾರಂಭದ ವೇದಿಕೆಯ ಮೇಲೆ ಪೌರಾಯುಕ್ತರಾದ ಎಚ್.ಬಕ್ಕಪ್ಪ ಹೊಸಮನಿ, ನಗರಸಭೆ ಸದಸ್ಯರಾದ ಗಣೇಶ್ ದುಪ್ಪಲ್ಲಿ,ಹಾಗೂ ಇತರರು ಉಪಸ್ಥಿತರಿದ್ದರು ಟ್ರಸ್ಟ್ ನ ಅಧ್ಯಕ್ಷರಾದ ಬಸವರಾಜ ಮಹಾಮನಿ ಪ್ರಾಸ್ತವಿಕವಾಗಿ ಮಾತನಾಡಿದರು ಬಸವರಾಜ ಸಿನ್ನೂರ ನಿರೂಪಿಸಿದರು ಅಶ್ವಿನಿ ಹೊಸಪೇಟೆ ಸ್ವಾಗತಿಸಿದರು ಮಹೇಶ್ ಕಲಬುರಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here