ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಅಂಬಿಗರ ಚೌಡಯ್ಯ

0
21

ಆಳಂದ: ನೇರ, ನಡೆ,ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಎಂದು ನಿಂಬರ್ಗಾ ನಿಜ ಶರಣ ಅಂಬಿಗರ ಚೌಡಯ್ಯ ಸಂಘದ ಮುಖಂಡ ಗುಂಡಪ್ಪ ಕೌಂಟಿಕರ ಅಭಿಪ್ರಾಯ ಪಟ್ಟರು.

ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ನಿಜ ಶರಣ ಅಂಬಿಗರ ಚೌಡಯ್ಯ ಸಮುದಾಯ ಭವನ ಆವರಣದಲ್ಲಿ ಅಂಬಿಗರ ಚೌಡಯ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯ ಪಟ್ಟರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಮಾತನಾಡಿ, ಯಾರಿಗೂ ಹೆದರದೇ, ಅಳುಕದೆ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು.ಕಾಯಕ ನಿಷ್ಠೆ ಉಳ್ಳವರು,ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿದ್ದವರಿಗೆ ಸಾಂತ್ವಾನ ಹೇಳಿ,ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಎಂದು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದವರು ನಿಜ ಶರಣ ಅಂಬಿಗರ ಚೌಡಯ್ಯ, ಎಲ್ಲಾ ವರ್ಗದವರು ಒಗ್ಗೂಡಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಬೇಕು ಎಂದರು.

ರಾಜು ಸಿಂಗೆ ಮಾತನಾಡಿ,ಸಮಾಜದ ಏಳಿಗೆಗೆ ಶಿಕ್ಷಣ ಅಗತ್ಯ, ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು, ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರಿಗೆ ಸನ್ಮಾನಿಸಿ,ನೆನಪಿನ ಕಾಣಿಕೆಯಾಗಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ವಿತರಿಸಲಾಯಿತು. ಅನೇಕರು ಅಂಬಿಗರ ಚೌಡಯ್ಯನವರ ವಚನಗಳನ್ನು ತಿಳಿಸಿದರು,ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು,

ಈ ಸಂದರ್ಭದಲ್ಲಿ ಶ್ರೀಶೈಲ್ ಮಾಲಿಪಾಟಿಲ್, ಈರಣ್ಣ ನಾಗಶೆಟ್ಟಿ,ಶ್ರೀಮಂತ ಸಾವಳೇಶ್ವರ,ಭೀಮಶಾ ಹಾದಿಮನಿ, ಬಾಬು ಬುಳ್ಳಾ,ಗುಂಡಪ್ಪ ಸುಣಗಾರ, ಜಗಯ್ಯ ಮಠಪತಿ, ಧೂಳಪ್ಪ ಮಾನೆ,ಶರಣಪ್ಪ ಹೂಗೊಂಡ,ಬಸವರಾಜ ಗುತ್ತೆದಾರ, ಹಾಲಪ್ಪ ಬುಳ್ಳಾ,ಧಶರಥ ಬುಳ್ಳಾ,ಸುರೇಶ್ ಭೀಮಳ್ಳಿ, ಕಲ್ಯಾಣಿ ಟಪ್ಪ, ಮರೆಪ್ಪಾ ಹಾದಿಮನಿ,ಕಾಂತು ಜಮಾದಾರ,ಶಂಕರ ಸುಣಗಾರ, ಗುರು ಹಂಚನಾಳ, ಮಂಜು ಕಾಳಗೊಂಡ, ಸುನಿಲ್ ಆನೂರ ಉಪಸ್ಥಿತರಿದ್ದರು.

ಅಭಿಷೇಕ ಮುಲಿಮನಿ ಸ್ವಾಗತಿಸಿದರು, ಅನಿಲ್ ಕುಮಾರ್ ಗೋಳಸರ್ ನಿರೂಪಿಸಿದರು, ಅಂಬಿಗರ ಚೌಡಯ್ಯ ಸಂಘದ ಮುಖಂಡ ಮಲ್ಲಿನಾಥ ನಾಟಿಕಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here