ಶರಣಬಸವ ವಿವಿಯಲ್ಲಿ ಕಾರ್ಯಾಗಾರಕ್ಕೆ ಚಾಲನೆ

0
92

ಕಲಬುರಗಿ: ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಕಾಯ್ದುಕೊಳ್ಳಲು ಶರಣಬಸವ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗಾಗಿ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ ಹಾಗೂ ಬೆಂಗಳೂರಿನ VI ಸಲ್ಯುಶನ್ಸ್ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ವಿವಿಯ ಡೀನ್ ಡಾ. ಲಕ್ಷ್ಮೀ ಪಾಟೀಲ ಚಾಲನೆ ನೀಡಿದರು.

ಶರಣಬಸವ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಹಾಗೂ ಬೆಂಗಳೂರಿನ ಗಿI ಸಲ್ಯುಶನ್ಸ್ ಜಂಟಿಯಾಗಿ ಒಂದು ವಾರ ಹಮ್ಮಿಕೊಂಡಿರುವ ಎಫ್‌ಡಿಪಿಯ ಭಾಗವಾದ ಅಪ್ಲಿಕೇಶನ್ಸ್ ಆಫ್ ಲ್ಯಾಬ್‌ವಿವ್ ಇನ್ ಟಿಚಿಂಗ್ & ರಿಸರ್ಚ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಈ ಕಂಪೆನಿಯು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿಯಾಗಿದೆ. ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮತ್ತು ಗುಣಾತ್ಮಕತೆ ತರುವ ಉದ್ದೇಶದಿಂದ ಈ ಕಾರ್ಯಗಾರ ಆಯೋಜಿಸಲಾಗಿದೆ.

Contact Your\'s Advertisement; 9902492681


ಕೈಗಾರಿಕೆ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳ ಮಧ್ಯದಲ್ಲಿನ ತೊಡಕನ್ನು ನಿವಾರಣೆ ಮಾಡಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಜೊತೆಗೆ ಶೈಕ್ಷಣಿಕ ಸಂಶೋಧನೆಯನ್ನು ಸರಿಯಾದ ಉಪಕರಣಗಳೊಂದಿಗೆ ಕೈಗೊಂಡು ಇಂಜಿನಿಯರಿಂಗ್ ಕ್ಷೇತ್ರದ ಬೃಹತ ಸವಾಲುಗಳನ್ನು ಕೈಗಾರಿಕೆ ಮತ್ತು ಸಮಾಜದೊಂದಿಗೆ ಬೆಸೆಯುವ ಕಾರ್ಯ ಮಾಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಗಿI ಸಲ್ಯುಶನ್ಸ್ ಕಂಪೆನಿಯ ಸೀನಿಯರ್ ಅಪ್ಲಿಕೇಷನ್ ಇಂಜಿನಿಯರ್ ಈಸಾಕ್ಕಿ ರಾಜ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಡಾ. ಶಿವುಕುಮಾರ ಜವಳಗಿ, ಪ್ರೊ. ಶಿವಗಂಗಾ ಪಾಟೀಲ, ಪ್ರೊ.ಆಶಾರಾಣಿ ಪಾಟೀಲ, ಪ್ರೊ.ಶರಣು ಕೊರಿಶೆಟ್ಟಿ, ಲಕ್ಷ್ಮಿ ಪಾಟೀಲ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರೊ. ಅಭಿಲಾಷಾ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here