ಕೊಪ್ಪಳ : ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆ ಕಾರ್ಯಕ್ರಮವು ಗಂಗಾವತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆಯಲ್ಲಿ ಪ್ರಸ್ತುತ 2021-22ನೇ ಅವಧಿಗೆ ನೂತನ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಇರ್ಫಾನ್, ಕಾರ್ಯದರ್ಶಿಯಾಗಿ ಹಮೀದ್, ಉಪಾಧ್ಯಕ್ಷರಾಗಿ ಅಫ್ಜಲ್ ಪಾಷಾ, ನೀಸಾರ್ ಅಹ್ಮದ್, ಕೋಶಾಧಿಕಾರಿಯಾಗಿ ಅಲ್ತಾಫ್ ಹುಸೇನ್, ಇಮ್ರಾನ್ ಖಾನ್, ಮಹಮ್ಮದ್ ಸರ್ವರ್, ಸೈಯದ್ ಮುತಾಹಿರ್ ಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯಾದರ್ಶಿಯಾದ ಅಡ್ವಕೇಟ್ ಅತವುಲ್ಲಾ, ಮತ್ತು ನೂತನ ಜಿಲ್ಲಾ ಸಮಿತಿ ಸದಸ್ಯರುಗಳು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.