ಕಲ್ಯಾಣ ಕರ್ನಾಟಕ ಹಿಂದುಳಿದ ಹಣೆಪಟ್ಟಿ ಕಳಚುವ ಶಕ್ತಿ ಶಿಕ್ಷಣಕ್ಕಿದೆ: ಪ್ರೊ ನಾಮದೇವ ಗೌಡ

0
24

ಸುರಪುರ: ನಗರದ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ   ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ನಾಮದೇವಗೌಡ ರವರಿಗೆ ಅಭಿನಂದನಾ ಸಮಾರಂಭವವನ್ನು ನಡೆಸಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೋ ನಾಮದೇವಗೌಡ ಅವರು,  ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರ ಉನ್ನತ ಶಿಕ್ಷಣದ ಕ್ರಾಂತಿಯನ್ನು ಮಾಡುತ್ತಾ  ಸಮ ಸಮಾನತೆಯ ಸಮಾಜದ ಕನಸನ್ನು ನನಸುಮಾಡುವತ್ತ ದಾಪುಗಾಲು ಹಾಕುತ್ತಿರುವ ಜನನಿ ಮಹಿಳಾ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ, ನಿಜಕ್ಕೂ ಈ ಭಾಗದ ಹಿಂದುಳಿದಿರುವ ಹಣೆಪಟ್ಟಿಯನ್ನು ಕಳಚುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ,  ಈ ನಿಟ್ಟಿನಲ್ಲಿ ಮಹಿಳೆಯರಿಗೆ ಗುಣಾತ್ಮಕ ಶಿಕ್ಷಣ ನೀಡಿ ಸಾಮಾಜಿಕ ಪ್ರಗತಿಗೆ ಕೈಜೋಡಿಸಿರುವ  ಮಹಾವಿದ್ಯಾಲಯದ  ಮೇಲೆ ಅತಿ ದೊಡ್ಡ ಜವಾಬ್ದಾರಿಯಿದೆ ಅದನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಿರುವ ಆಡಳಿತ ಮಂಡಳಿ ಮತ್ತು  ಸಿಬ್ಬಂದಿಗಳ ಶ್ರಮ ಪ್ರಶಂಸಾದಾಯಕವಾದದ್ದು ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಮಾತನಾಡಿ, ಇಂದು ನಮ್ಮ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳು ಆಗಮಿಸಿದ್ದಕ್ಕಾಗಿ ನಮ್ಮೆಲ್ಲರ ಉತ್ಸಾಹ ಇಮ್ಮಡಿಯಾಗಿದೆ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಕಾರ್ಯನಿರ್ವಹಿಸಿ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಗುಣಾತ್ಮಕ ಶಿಕ್ಷಣ ನೀಡಿ ಮಹಿಳಾ ಶೈಕ್ಷಣಿಕ ಕ್ರಾಂತಿಯನ್ನು ಮಾಡಲು ನಾವು ಉತ್ಸುಕರಾಗಿದ್ದೇವೆಂದು ನುಡಿದರು.

ಕಾರ್ಯಕ್ರಮದ ವೇದಿಕೆಯಮೇಲೆ ಸಂಸ್ಥೆಯ ಉಪಾಧ್ಯಕ್ಷರಾದ ರಾಜಶೇಖರಯ್ಯ ನೀಲಗಾರ ಉಪಸ್ಥಿತರಿದ್ದರು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಕಮತಗಿ ಪ್ರಾಸ್ಥಾವಿಕ ಮಾತನಾಡಿದರು, ಉಪನ್ಯಾಸಕರಾದ ಸುವರ್ಣಾ ಅಂಟೊಳಿ, ಮರೆಮ್ಮ ಕಟ್ಟಿಮನಿ, ಸ್ನೇಹಾ ಶಾಬಾದಿ, ಶ್ರೀದೇವಿ ನಾಯಕ, ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಬೀರೇಶ ದೇವತ್ಕಲ್, ಮಹೇಶ ಗಂಜಿ, ಚಂದ್ರಶೇಖರ ನಾಯಕ, ಅಂಬ್ರೇಶ ಚಿಲ್ಲಾಳ, ಮುಂತಾಧವರು ಉಪಸ್ಥಿತರಿದ್ದರು, ರಾಜೇಶ್ವರಿ ಮತ್ತು ಲಕ್ಷೀ ನಿರೂಪಿಸಿದರು, ಸಹನಾ ಅಸಗಳಿ ಸ್ವಾಗತಿಸಿದರು, ಲಲಿತಾ ಅಮ್ಮಾಪೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here