ಔರಾದ್ಕರ್ ವರದಿ ಜಾರಿಗೆ ಒತ್ತಾಯಿಸಿ ಹೆಚ್.ಡಿ.ಕುಮಾರಸ್ವಾಮಿ ಸೇನೆ ಹೋರಾಟ

0
124

ಸುರಪುರ: ಸಮಾಜದಲ್ಲಿನ ಎಲ್ಲಾ ಒಳಿತು ಕೆಡಕುಗಳು ನಡೆದಾಗ ಮೊದಲು ನೆನಪಾಗುವುದು ಪೊಲೀಸರು,ಆದರೆ ಪೊಲೀಸರಿಗೆ ಸರಿಯಾದ ಜೀವನ ನಡೆಸಲು ಅನುಕೂಲವಾಗುವಂತೆ ಸರಕಾರಗಳು ಅವರ ಬಹು ದಿನಗಳ ಬೇಡಿಕೆಯಾದ ಔರಾದ್ಕರ್ ವರದಿ ಜಾರಿಗೊಳಿಸುವಂತೆ ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಒತ್ತಾಯಿಸಿದರು.

ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಇಂದು ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿವೆ,ಅಲ್ಲದೆ ಮಕ್ಕಳ ಶಾಲೆ ಮತ್ತಿತರೆ ಖರ್ಚುಗಳು ಎಥೆಚ್ಚವಾಗಿವೆ.ಆದರೆ ಪೊಲೀಸರಿಗೆ ನ್ಯಾಯಯುತವಾದ ಸಂಬಳ ನೀಡದೆ ಸರಕಾರಗಳು ಅನ್ಯಾಯ ಮಾಡುತ್ತಿವೆ.ಇಂದು ಎಲ್ಲರಂತೆ ಪೊಲೀಸರು ಉತ್ತಮ ಜೀವನ ನಡೆಸುವ ಅವಶ್ಯಕತೆಯಿದೆ.

Contact Your\'s Advertisement; 9902492681

ಎಲ್ಲರಿಗೆ ರಕ್ಷಣೆ ನೀಡುವ, ನಿತ್ಯವು ಹಗಲಿರಳೆನ್ನದೆ ದುಡಿಯುವ ಪೊಲೀಸರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನೊಳಗೊಂಡು ಔರಾದ್ಕರವರ ವರದಿಯನ್ನು ಕೂಡಲೆ ಜಾರಿಗೊಳಿಸಬೇಕೆಂದು ಮಾನ್ಯ ಮುಖ್ಯಮಂತರಿ ಮತ್ತು ಗೃಹ ಮಂತ್ರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿ, ಸುಮಾರು ಅರ್ಧ ಗಮಟೆಗು ಹೆಚ್ಚು ಕಾಲ ರಸ್ತೆ ತಡೆ ನಡೆಸಿ ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರ ಪ್ರವೀಣ ಕುಮಾರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here