ಸುರಪುರ: ನಗರದ ಹಸನಾಪುರ ಪೆಟ್ರೋಲ್ ಪಂಪ್ ಬಳಿಯಿರುವ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಬಿ.ಇ.ವಿದ್ಯುತ್ ಮತ್ತು ವಿದ್ಯೂನ್ಮಾನ ವಿಭಾಗ ಪದವಿ ಕೋರ್ಸನ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರಾಯೋಗಿಕ ಪ್ರೋಜೆಕ್ಟ್ ಅಭ್ಯಾಸದಲ್ಲಿ ಸೋಲಾರ್ ಕಾರ್ ಎಂಬ ಪ್ರಯೋಗಿಕ ಸೊಲಾರ್ ಶಕ್ತಿ ಚಾಲಿತ ಕಾರನ್ನು ತಯಾರಿಸಿದ್ದಾರೆ.
ಈ ಸೌರ ಚಾಲಿತ ಕಾರ್ ಪರಿಸರ ಸ್ನೇಹಿಯಾಗಿದ್ದು, ಯಾವುದೆ ಅನಿಲ ಬಳಸದೆ ಕಡಿಮೆ ಕರ್ಚಿನಲ್ಲಿ ತಯಾರಿಸಲಾಗಿದೆ. ಘಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ.ಕಾರು ತಯಾರಿಸಲು ಸೋಲಾರ್ ಪೆನಲ್, ಬಿಲ್‌ಡಿಸಿ ಮೋಟಾರ್, ಲೀಡ್ ಆಸಿಡ್ ಬ್ಯಾಟರಿ, ಎಕ್ಸಲರೆಟರ್ ಮತ್ತು ಇತರೆ ಕೆಲ ಉಪಕರಣಗಳನ್ನು ಉಪಯೋಗಿಸಿ ತಯಾರಿಸಲಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಡಾ: ರವೀದ್ರ ಕುಮಾರ ನಗರಾಳೆಯವರು.
ಕಾರ್ ತಯಾರಿಕಾ ತಂಡದಲ್ಲಿದ್ದ ವಿದ್ಯಾರ್ಥಿಗಳಾದ ಸಿದ್ದಲಿಂಗರೆಡ್ಡಿ,ಮೊಹಮ್ಮದ ಖಾಜಾ ಹುಸ್ಸೆನ್,ಲಕ್ಷ್ಮಣ,ಮಹಾದೇವಸ್ವಾಮಿ,ಪ್ರಿಯಾಂಕ,ರೇಖಾ ಮತ್ತು ಸೌಮ್ಯ ಇವರುಗಳ ಸಾಧನೆಗೆ ಇಡೀ ಕಾಲೇಜಿನ ಮಂಡಳಿ ಸಂತಸ ವ್ಯಕ್ತಪಡಿಸಿ, ಕಾಲೇಜಿನ ಆವರಣದಲ್ಲಿ ಪ್ರಯೋಗಿಕ ಸೋಲಾರ್ ಕಾರ್‌ನ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಂದ್ರ ಕುಮಾರ ಎಮ್. ನಾಗರಾಳೆ ಹಾಗು ಮಾರ್ಗದರ್ಶಕರಾದ ಪ್ರೋ. ಸಂಜಯ ಶಿವಶಂಕರಪ್ಪ, ವಿಭಾಗ ಮುಖ್ಯಸ್ಥರಾದ ಪ್ರೋ. ಪ್ರಶಾಂತ ಚಿನಮಳ್ಳಿ, ಹಾಗೂ ಪ್ರೋ. ಕೈಲಾಸ್ ಪಾಟೀಲ್, ಪ್ರೋ. ಅಶೋಕ ಪಾಟೀಲ್, ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.