ಪಡಿತರ ಮೂಲಕ ಜೋಳ, ತೊಗರಿ, ಹೆಸರುಕಾಳು, ರಾಗಿ ವಿತರಣೆಗೆ ಕ್ರಮ: ಉಮೇಶ್ ವಿ. ಕತ್ತಿ

0
26

ಕಲಬುರಗಿ: ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಜೋಳ, ತೊಗರಿ ಹಾಗೂ ಹೆಸರು ಕಾಳುಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮಕೈಗೊಳ್ಳುವುದಾಗಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ. ಕತ್ತಿ ಅವರು ಭರವಸೆ ನೀಡಿದರು.

ಕಲಬುರಗಿ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಹಾಗೆಯೇ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿ ಧಾನ್ಯವನ್ನೂ ಪಡಿತರಕ್ಕೆ ಸೇರ್ಪಡೆ ಮಾಡಲಿದ್ದು, ಏಪ್ರಿಲ್ ಒಂದರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಆಹಾರ ಧಾನ್ಯಗಳ ವಿತರಣೆ ಮಾಡಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 4.36 ಕೋಟಿ ಜನರಿಗೆ ಬಡತನ ರೇಖೆ ಕೆಳಗಿರುವ (ಬಿಪಿಎಲ್) ಹಾಗೂ ಅಂತ್ಯೋದಯ ಕಾರ್ಡ್‍ಗಳನ್ನು ವಿತರಿಸಲಾಗುತ್ತದೆ. ಆಹಾರ ಭದ್ರತೆ ಯೋಜನೆಯಡಿಯಲ್ಲಿ 2.10 ಲಕ್ಷ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಯೋಜನೆಯಡಿ ಒಟ್ಟು 3 ಲಕ್ಷ ಕಾರ್ಡ್‍ಗಳನ್ನು ರಾಜ್ಯ ಸರ್ಕಾರ ವಿತರಿಸಿದೆ ಎಂದು ವಿವರಿಸಿದರು.

70 ವರ್ಷಗಳಿಂದ ಇರುವ ಕೃಷಿ ಮಾರುಕಟ್ಟೆ ಕಾಯ್ದೆಗಳನ್ನು ರೈತರ ಅನುಕೂಲಕ್ಕೋಸ್ಕರ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಇದರ ವಿರುದ್ಧ ಹೋರಾಡದೆ, ಸ್ವಲ್ಪ ದಿನಗಳ ಕಾಯಿರಿ. ಕಾಯ್ದೆಯಲ್ಲಿ ನ್ಯೂನತೆ ಕಂಡು ಬಂದಲ್ಲಿ ಕೇಂದ್ರ ಸರ್ಕಾರವೇ ಸರಿಪಡಿಸಲಿದೆ. ಹೋರಾಟ ಕೈಬಿಡಿ ಎಂದು ಅವರು ಮನವಿ ಮಾಡಿದರು.

ನೀರಾವರಿ ಯೋಜನೆಗಳ ಜಾರಿ ಸೇರಿದಂತೆ ಈ ಭಾಗದ ಅಭಿವೃದ್ಧಿ ನಾನು ಬದ್ಧನಾಗಿದ್ದೇನೆ. ಕರ್ನಾಟಕ ಇಬ್ಭಾಗ ಮಾಡಬೇಕೆಂಬುದು ನನ್ನ ಉದ್ದೇಶವಲ್ಲ, ಆದರೆ, ಈ ಭಾಗಕ್ಕೆ ಅನ್ಯಾಯವಾದದ್ದಾದರೆ, ಈ ಭಾಗದ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಧ್ವನಿ ಎತ್ತಲಿದ್ದೇನೆ ಎಂದು ಅವರು ಎಚ್ಚರಿಸಿದರು.

ಬಳ್ಳಾರಿ ಜಿಲ್ಲೆ ವಿಚಾರ ಕುರಿತಂತೆ ಕೇಳಲಾದ ಪ್ರಶ್ನೆಗೆ, ಬಳ್ಳಾರಿ ಕರ್ನಾಟಕದಲ್ಲೇ ಇರಬೇಕು, ಕರ್ನಾಟಕ ಒಗ್ಗಟ್ಟಿನಿಂದ ಕೂಡಿ ಅಖಂಡವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು.

ನನಗೆ ನೀಡಿರುವ ಆಹಾರ, ನಾಗರಿಕ ಸರಸಚಿವ ಖಾತೆ ತೃಪ್ತಿ ತಂದಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here