ಶಹಾಬಾದ: ನಗರದ ಜೆಪಿ ಕಾಲೋನಿಯಲ್ಲಿ ನಿವೃತ್ತರಾಗಿರುವ ಕಡು ಬಡವ ಕಾರ್ಮಿಕರ ಕುಟುಂಬದವರಿಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ದವಸ ಧಾನ್ಯದ ಕಿಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಜೆಪಿ ಕಾರ್ಖಾನೆಯಲ್ಲಿ ನಿವೃತ್ತರಾಗಿರುವ 40 ಬಡ ಕುಟುಂಬಗಳಿವೆ ಎಂದು ತಿಳಿಸಿದಾಗ, ತಕ್ಷಣವೇ ಅವರಿಗೆ ನೆರವಿಗೆ ಬಂದಿದ್ದೆವೆ. ಇದ್ದವರು ಕೂಡ ಇಲ್ಲದವರಿಗೆ ಸಹಾಯ ಹಸ್ತ ಚಾಚಿದರೆ ಬಡ ಕುಟುಂಬಗಳಿಗೆ ಸಹಾಯವಾದೀತು. ಅಲ್ಲದೇ ಇನ್ನೂ ಉಳಿದಿರುವ ಕುಟುಂಬದವರಿಗೂ ಕಿಟ್ ವಿತರಿಸುವ ವ್ಯವಸ್ಥೆ ಮಾಡುವದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಅಕ್ಕಿ,ಬೆಳೆ, ಎಣ್ಣೆ ಇತರ ಸಾಮಗ್ರಿ ಹಾಗೂ ಮಾಸ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ವರ್ಮಾ, ತಾಪಂ. ಕಾರ್ಯನಿರ್ವಾಕ ಅಧಿಕಾರ ಲಕ್ಷ್ಮಣ ಶೃಂಗೇರಿ, ಚಿತ್ತಾಪುರ ತಾಲೂಕ ಬಿಜೆಪಿ ಅಧ್ಯಕ್ಷ ನೀಲಕಂಠರಾವ ಪಾಟೀಲ, ನಗರ ಘಟಕದ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪಿಐ.ಬಿ.ಅಮರೇಶ, ಪೌರಾಯುಕ್ತ ವೆಂಕಟೇಶ, ಪಿಎಸ್‍ಐ ಮಹಾಂತೇಶ ಪಾಟೀಲ, ಕನಕಪ್ಪ ದಂಡಗುಲಕರ್, ಅಣ್ಣಪ್ಪ ದಸ್ತಾಪುರ, ನಾಗರಾಜ ಮೇಲಗಿರಿ, ಸುಭಾಷ ಜಾಪೂರ, ನಿಂಗಣ್ಣ ಹುಳಗೋಳ,ಚಂದ್ರಕಾಂತ ಗೊಬ್ಬುರಕರ್, ದುರ್ಗಪ್ಪ ಪವಾರ, ರವಿ ರಾಠೋಡ, ಭೀಮಯ್ಯ ಗುತ್ತೇದಾರ, ಸದಾನಂದ ಕುಂಬಾರ ಇತರರು ಇದ್ದರು.