ಗಣರಾಜ್ಯೋತ್ಸವ ಮನೆ-ಮನೆಗಳಲ್ಲಿ ಆಚರಣೆಗೆ ಬರಲಿ: ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

0
19

ಭಾಲ್ಕಿ: ಹಿರೇಮಠ ಸಂಸ್ಥಾನದ ಆವರಣದಲ್ಲಿ ಇರುವ ಗುರುಪ್ರಸಾದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭೃಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿರುವ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಆಶೀರ್ವಚನದಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಹಬ್ಬಗಳು ಹಾಗೂ ರಾಷ್ಟ್ರೀಯ ಹಬ್ಬಗಳು ನಾವು ಆಚರಿಸುತ್ತೇವೆ. ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಾತಂತ್ಯ್ರೋತ್ಸವ ಹಾಗೂ ಗಣರಾಜ್ಯೋತ್ಸವವನ್ನು ನಾವು ಅತ್ಯಂತ ಸಂಭೃಮದಿಂದ ಮನೆ-ಮನೆಗಳಲ್ಲಿ ಆಚರಿಸುವ ಅಗತ್ಯತೆ ಇದೆ. ರಾಷ್ಟ್ರೀಯ ಹಬ್ಬಗಳನ್ನು ಶಾಲೆ ಮತ್ತು ಸರ್ಕಾರಿ ಕಛೇರಿಗಳಿಗೆ ಸೀಮಿತವಾಗಿರದೆ ಪ್ರತಿಯೊಬ್ಬ ಭಾರತೀಯರ ಹಬ್ಬವಾಗಿ ಪ್ರತಿಯೋದು ಮನೆಯಲ್ಲಿ ಆಚರಿಸುವ ಮೂಲಕ ನಾವು ರಾಷ್ಟ್ರ ಭಕ್ತಿಯನ್ನು ಮೇರೆಯಬೇಕು. ರಾಷ್ಟ್ರದ ಯಾವುದೇ ಕೆಲಸ ಕಾರ್ಯಗಳು ಪ್ರಾಮಾಣಿಕವಾಗಿ ಮಾಡುವ ಮೂಲಕ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಬೇಕು. ನಮ್ಮ ರಾಷ್ಟ್ರ ಸ್ವಚ್ಛ, ಸುಂದರ, ನಿರ್ಮಲ ಹಾಗೂ ಸದೃಢ ಆಗಬೇಕಾದರೆ ನಾವೆಲ್ಲರು ಪ್ರಾಮಾನಿಕವಾಗಿ ದುಡಿಯಬೇಕು ಎಂದು ನುಡಿದರು.

Contact Your\'s Advertisement; 9902492681

ಧ್ವಜಾರೋಹಣವನ್ನು ಗದುಗಿನ ಶಿವಾನಂದ ಮಠದ ಪೂಜ್ಯ ಶ್ರೀ ಕೈವಲ್ಯಾನಂದ ಮಹಾಸ್ವಾಮಿಗಳಿಂದ ನೇರವೆರಿತು. ಅವರು ಶ್ರೀ ಮಠಕ್ಕೆ ಮೊದಲನೆ ಬಾರಿ ಆಗಮಿಸಿದಕ್ಕಾಗಿ ಅವರಿಗೆ ಶ್ರೀಮಠದಿಂದ ಗೌರವಿಸಲಾಯಿತು. ಪೂಜ್ಯ ಶ್ರೀ ಬಸವಲಿಂಗ ದೇವರು ಸಮ್ಮುಖ ವಹಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯ ವತಿಯಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಸಿದ್ರಾಮ ರಾಜಪೂರೆ ಕಾರ್ಯಕ್ರಮದ ಸಂಚಾಲನೆ ಮಾಡಿದರು. ಸವಿತಾ ಭುರೆ ಸ್ವಾಗತಿಸಿದರು. ಬಾಬು ಬೆಲ್ದಾಳ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here