ಕಲಬುರಗಿ: ಸರಳ ಸಜ್ಜನ ರಾಜಕಾರಣಿ, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಸಿಂದಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಸಿ.ಮನಗೂಳಿ ವಿಧಿವಶರಾದ ವಿಷಯ ಅತೀವ ದುಃಖವನ್ನು ಉಂಟುಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮನಗೂಳಿಯವರು ತಂದೆಯವರಾದ ದಿ. ಧರಂಸಿಂಗ್ ಅವರ ಒಡನಾಡಿಗಳೂ ಆಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಬಂಧುಗಳು, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಶೋಖ ವ್ಯಕ್ತಪಡಿಸಿದ್ದಾರೆ.