ಕಲಬುರಗಿ: ನಗರದ ಗಂಜ ಕಾಲೋನಿಯ ನಗರೇಶ್ವರ ಶಾಲೆ ಎದುರುಗಡೆ ಶ್ರೀ ಮೈಲಾರ ಮಲ್ಲಣ್ಣ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಪ್ರಾರಂಭಿಸಲಾದ ಇ-ಸ್ಟ್ಯಾಂಪ್ ಸೇವೆಗೆ ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾಮಂಡಳದ ಅಧ್ಯಕ್ಷ ಗುರುನಾಥ ಜಾಂತೀಕರ್ ಅವರು ಚಾಲನೆ ನೀಡಿದರು. ಸಂಘದ ಸಂಸ್ಥಾಪಕ ಸಂತೋಷಕುಮಾರ ಎಂ. ಹಾದಿಮನಿ, ಅಧ್ಯಕ್ಷ ಮಲ್ಲಿನಾಥ ಜಿ. ಹಾದಿಮನಿ, ಸಂಜೀವ ಮಹಾಜನ, ಎಸ್ ಎಸ್ ಪಾಟೀಲ, ರಾಜಶೇಖರ ಓಂಕಾರ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಇದ್ದರು.