ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ರಚನೆ

0
295

ಕಲಬುರಗಿ: ಕಲ್ಯಾಣ ಕರ್ನಾಟಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಸುನಿಲ್ ಹುಡುಗಿ ನೇತೃತ್ವದಲ್ಲಿ ಜೇವರ್ಗಿ ತಾಲೂಕ ಸಮಿತಿಯನ್ನು ರಚಿಸಲಾಯಿತು.

ತಾಲೂಕಿನಲ್ಲಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು 2015ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರದ ಅನುದಾನವನ್ನು ಪಡೆಯುವಲ್ಲಿ ಒಕ್ಕೂಟದ ಹೋರಾಟ ಅನಿವಾರ್ಯವಾಗಿದೆ ಎಂದು ಜಿಲ್ಲಾ ಅಧ್ಯಕ್ಷರು ತಿಳಿಸಿದರು.

Contact Your\'s Advertisement; 9902492681

ಇದೇ ಸಮಯದಲ್ಲಿ ಜೇವರ್ಗಿ ತಾಲೂಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಒಕ್ಕೂಟದ ತಾಲೂಕ ಅಧ್ಯಕ್ಷರಾಗಿ ಮಹಮ್ಮದ್ ಇಬ್ರಾಹಿಂ ಪಟೇಲ್ ಹಾಗೂ ಗೌರವಾಧ್ಯಕ್ಷರಾಗಿ ಮಹಾಂತಯ್ಯ ಹಿರೇಮಠ್, ಪ್ರಧಾನ ಕಾರ್ಯದರ್ಶಿಗಳಾಗಿ ಸಾಹೇಬಗೌಡ ಕಡ್ಲೆ, ಉಪಾಧ್ಯಕ್ಷರಾಗಿ ರವಿ ಗೋಲ್ಡ್ ಸ್ಮಿತ್, ತ್ರಿಮೂರ್ತಿ ಮುತ್ತಣ್ಣ ,ಭೀಮರಾಯ ಗುಜಗೊಂಡ, ಆನಂದ್ ಭಾಸ್ಕರ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಸುಂಬಡ ,ನಿಂಗಣ್ಣ ಮಯೂರ, ನಾಗಭೂಷಣ ಹಾಗೂ 371(ಜೇ)ಸಂಚಾಲಕರಾಗಿ ರಾಜು ಮುದ್ದಡಗಿ, ಕನ್ನಡ ಮಾಧ್ಯಮ ಶಾಲೆಗಳ ಸಂಚಾಲಕರಾಗಿ ಗುಂಡಣ್ಣ ಬಡಿಗೇರ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಸುನಿಲ್ ಹುಡುಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here