ಮಾಸಿಕ ಶಿವಾನುಭವ ಗೋಷ್ಠಿ

0
25

ಭಾಲ್ಕಿ: ಮರ ಮರ ಮಥನಿಸಿ ಇಡೀ ಅರಣ್ಯ ಸುಡುವಂತೆ ಶರಣರ ಅನುಭಾವದಿಂದ ಭವದುಃಖ ಸುಡುತ್ತದೆ. ಬದುಕು ಸಮಾಧಾನದಿಂದ ಮುನ್ನಡೆಯುತ್ತದೆ ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಲಾದ ಮಾಸಿಕ ಶಿವಾನುಭವಗೋಷ್ಠಿಯ ದಿವ್ಯ ಸನ್ನಿಧಾನವಹಿಸಿ ಪೂಜ್ಯರು ಆಶೀರ್ವಚನಗೈದರು. ನೇತೃತ್ವ ವಹಿಸಿದ್ದ ಪೂಜ್ಯ ಗುರುಬಸವ ಪಟ್ಟದ್ದೇವರು ಭಾರತ ದೇಶದ ಸಂತ ಮಹಾಂತರಲ್ಲಿ ಶರಣರ ಪಾತ್ರ ಹಿರಿದಾಗಿದೆ. ಸಮ್ಮುಖ ವಹಿಸಿದ್ದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಭೌತಿಕ ಸುಖ ದುಃಖ ಕೊಡುತ್ತದೆ. ಅದರ ಬೆನ್ನು ಹತ್ತದೆ ಆಧ್ಯಾತ್ಮ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಇಂದಿನ ಕಾರ್ಯಕ್ರಮದ ಭಕ್ತಿದಾಸೋಹ ವಹಿಸಿಕೊಂಡಿದ್ದ ಶಾಮಲಾ ವೈಜಿನಾಥರಾವ ಮೇತ್ರೆ ಅವರಿಗೆ ಪೂಜ್ಯರು ಗೌರವಿಸಿದರು. ಮೇತ್ರೆ ಪರಿವಾರದ ಎಲ್ಲರು ಭಾಗವಹಿಸಿದರು. ಲಕ್ಷ್ಮಿ ಸಂಗಮೆ, ಸರಸ್ವತಿ ಬಿರಾದಾರ ಮತ್ತು ಅಕ್ಕನಬಳಗದ ಶರಣೆಯರಿಂದ ವಚನ ಭಜನೆ ನಡೆಯಿತು. ಬಾಬು ಬೆಲ್ದಾಳ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು. ರಾಜು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here