ನವೀಕರಣವಾಗದ ಸ್ಕ್ಯಾನಿಂಗ್ ಯಂತ್ರಗಳ ಮುಟ್ಟುಗೋಲು: ಡಾ.ಮೇಘಾ ಕಮಲಾಪೂರಕರ್

0
38

ಕಲಬುರಗಿ: ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸ್ಕ್ಯಾನಿಂಗ್ ಕೇಂದ್ರಗಳು ನವೀಕರಣ ಮಾಡಿಸಿಕೊಳ್ಳಬೇಕು. ನವೀಕರಣ ಮಾಡದೇ ನಿರ್ಲಕ್ಷ್ಯವಹಿಸಿದರೆ ಅಂತಹ ಸ್ಕ್ಯಾನಿಂಗ್ ಕೇಂದ್ರಗಳನ್ನು ಮುಚ್ಚು ಯಂತ್ರಗಳನ್ನು ಮುಟ್ಟುಗೋಲು (ಸೀಜ್) ಹಾಕಲಾಗುವುದು ಎಂದು ಜಿಲ್ಲಾ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ.ಮೇಘಾ ಕಮಲಾಪೂರಕರ್ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಕೊಠಡಿಯಲ್ಲಿ ನಡೆದ ಪ್ರಸವ ಪೂರ್ವ ಮತ್ತು ಹೆರಿಗೆ ಪೂರ್ವ ಪತ್ತೆ ಹಚ್ಚುವ ತಂತ್ರ (ಲಿಂಗ ಪತ್ತೆ ನಿಷೇಧ) ಕಾಯ್ದೆ 1994ಯಡಿಯಲ್ಲಿ ರಚಿತವಾದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲೆಯಲ್ಲಿ ನವೀಕರಣ ಮಾಡಿಕೊಳ್ಳದ ಆಸ್ಪತ್ರೆಗಳ ಸ್ಕ್ಯಾನಿಂಗ್ ಯಂತ್ರಗಳ ಪ್ರಕರಣಗಳಿದಲ್ಲಿ ಪತ್ತೆ ಹಚ್ಚಿ ಅಂತಹವರಿಗೆ ನೋಟಿಸ್ ನೀಡಬೇಕು. ಸ್ಕ್ಯಾನಿಂಗ್ ಕೇಂದ್ರ ನವೀಕರಣಕ್ಕಾಗಿ ಆಸ್ಪತ್ರೆ ಅಥವಾ ಸ್ಕ್ಯಾನಿಂಗ್ ಕೇಂದ್ರದವರು ಒಂದು ತಿಂಗಳು ಮೊದಲೇ ಅರ್ಜಿ ಸಲ್ಲಿಸಬೇಕು ಎಂದರು. ನೋಂದಣಿಗೆ ಬಂದ ಹೊಸ ಅರ್ಜಿಗಳು, ನೋಂದಣಿ ನವೀಕರಣ, ಹೊಸ ಸ್ಕ್ಯಾನಿಂಗ್ ಯಂತ್ರಗಳ ನೋಂದಣಿಗಾಗಿ ಬಂದ ಅರ್ಜಿಗಳ ಕುರಿತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರ ನಾಗಲೇಕರ ಅವರು ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾದ ಡಾ.ಜ್ಯೋತಿ ಓ. ಪಾಟೀಲ, ಡಾ. ಶ್ರೀಶೈಲ್ ಎಸ್. ಪಾಟೀಲ, ವಿಶ್ವ ಸೇವಾ ಮಿಷನ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮಿ, ಸಮಗ್ರ ಅಭಿವೃದ್ಧಿ ಸಂಘಟನೆಯ ಭಾಗ್ಯಲಕ್ಷ್ಮಿ, ಲೋಕ ಶಿಕ್ಷಣ ಸಮಿತಿಯ ಕಾಶಿರಾಯ ಜೋಗದಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here