ಕಸಾಪ ಕಲ್ಯಾಣಕ್ಕಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಯನ್ನು ಗೆಲ್ಲಿಸಿ: ಶಿವರಾಜ ಪಾಟೀಲ‌

0
210

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಕಲ್ಯಾಣಕ್ಕಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೇಂದ್ರ ಕಸಾಪ ಚುನಾವಣೆಯ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಶಿವರಾಜ ಪಾಟೀಲ ತಿಳಿಸಿದರು.

ಕಸಾಪಕ್ಕೆ 115 ವರ್ಷವಾಗಿದ್ದು, ಈವರೆಗೆ ೨೫ ಅಧ್ಯಕ್ಷರುಗಳು ಆಯ್ಕೆಯಾಗಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಯಾರೊಬ್ಬರೂ ಅಧ್ಯಕ್ಷ ರಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಕರ್ನಾಟಕ, ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಸಾಪಕ್ಕೆ ಸಾಹಿತಿಗಳಾದವರನ್ನೇ ಆಯ್ಕೆ ಮಾಡಬೇಕು. ತಾವು ಈವರೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಈವರೆಗೆ ೪೨ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಈ ಭಾಗಕ್ಕೆ ನ್ಯಾಯ ಸಿಗಬೇಕಾದರೆ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದೇವೇಳೆಯಲ್ಲಿ ತಮ್ಮ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಸಾಹಿತಿಗಳಲ್ಲದವರನ್ನು ಕಸಾಪಕ್ಕೆ ಆಯ್ಕೆ ಮಾಡಬೇಡಿ, ಪ್ರಾದೇಶಿಕ ಅಸಮಾನತೆಗಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ಯನ್ನು ಗೆಲ್ಲಿಸಬೇಕು, ಕಲ್ಯಾಣ ಕರ್ನಾಟಕಕ್ಕೆ ಅವಕಾಶ ಕೊಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಬಗ್ಗು ಬಡಿಯಬೇಕು ಎಂದು ಆವರು ಕೋರಿದರು.

ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಹಿಂದಿ ಭಾಷೆಯ ಪರವಾಗಿ ವಕಾಲತ್ತು ವಹಿಸುತ್ತಿದ್ದು, ಅಧ್ಯಕ್ಷ ಪದವಿಯಿಂದ ಅವರ ಹೆಸರನ್ನು ರದ್ದು ಮಾಡಿ ಹೊಸ ಅಧ್ಯಕದಷರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಶವ ಕೃಪ ಇಲ್ಲವೆ ಕೇಸರಿಕರಣದ ಫರ್ಮಾನುಗಳನ್ನು ಕಸಾಪ ಕೇಳಬಾರದು. ಅದೊಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂಬುದನ್ನು ಮರೆಯಬಾರದು ಎಂದರು.  ಕಸಾಪ ಅವಧಿ ಐದು ವರ್ಷ ನಿಗದಿಗೊಳಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡ್ಡಿಯಾಗಲಿದೆ. ಇದರಿಂದಾಗಿ ಸರ್ವಾಧಿಕಾರ ಬೆಳೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತಾವು ಗೆದ್ದು ಬಂದರೆ ಅಧ್ಯಕ್ಷರ ಅಧಿಕಾರಾವಧಿಯನ್ನು ಪುನಃ ಮೂರು ವರ್ಷಕ್ಕೆ ಮೊಟಕುಗೊಳಿಸುವುದಾಗಿ ಅವರು ಭರವಸೆ ನೀಡಿದರು.

ಸಿಂಪಿ ಬೇಜವಾಬ್ದಾರಿ ಹೇಳಿಕೆ: ಕಲಬುರಗಿಯಲ್ಲಿ ಕಳೆದ ವರ್ಷ ನಡೆದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹೇಳಿದರು.

ಸರ್ಕಾರ, ಕಸಾಪ ಹಾಗೂ ಸಾರ್ವಜನಿಕರ ಅನುದಾನ, ವಂತಿಗೆ ಸೇರಿ ಸುಮಾರು 18 ಕೋಟಿ ಜಮಾ ಆಗಿದ್ದು, ಇದರ ಸಂಪೂರ್ಣ ಲೆಕ್ಕಪತ್ರ ಕೊಡುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಕೋಶಾಧ್ಯಕ್ಷ, ಜಿಲ್ಲಾ ಕಸಾಪ ಅಧ್ಯಕ್ಷರು ಹಾಗೂ ಸಮ್ಮೇಳನದ ಕಾರ್ಯದರ್ಶಿಗಳು ಕೊಡಬೇಕು ಎಂದು ಅವರು ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here