ಗುಲ್ಬರ್ಗ ವಿವಿ ಸುಧಾರಣೆಗೆ ಅಗತ್ಯ ಕ್ರಮ: ದಯಾನಂದ ಅಗಸರ

0
53

ಕಲಬುರಗಿ: ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಕೊಡುವ ಮೂಲಕ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಒಯ್ಯುವುದಾಗಿ ಕುಲಪತಿ ಪ್ರೊ. ದಯಾನಂದ ಅಗಸರ್ ತಿಳಿಸಿದರು.

ನೂತನ ಕುಲಪತಿಗಳಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಸಾಹಿತಿಗಳಾದ ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಸೂರ್ಯಕಾಂತ ಪಾಟೀಲ, ಕಲಬುರಗಿ ತಾಲ್ಲೂಕು ಕಸಾಪ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ ಅವರೊಂದಿಗೆ ಮಾತನಾಡಿದ ಅವರು, ಇದುವರೆಗಿನ ವಿಶ್ವವಿದ್ಯಾಲಯದ ಆಡಳಿತಕ್ಕಿಂತ ಭಿನ್ನವಾಗಿ ಕಾರ್ಯನಿರ್ವಸುವ ಮೂಲಕ ದೇಶಾದ್ಯಂತ ಹೆಸರು ಮಾಡುವುದಾಗಿ ಅವರು ತಿಳಿಸಿದರು.

Contact Your\'s Advertisement; 9902492681

ಗುಲ್ಬರ್ಗ ವಿವಿ ಕೇವಲ ಸ್ನಾತಕೋತ್ತರ ವಿದ್ಯಾರ್ಥಿ, ಸಂಶೋಧನ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರ ವಿಶ್ವವಿದ್ಯಾಲಯವಲ್ಲ. ಸಾರ್ವಜನಿಕರ ವಿಶ್ವವಿದ್ಯಾಲಯ ತಾವೆಲ್ಲರೂ ಆಗಾಗ ಭೇಟಿ ನೀಡಿ ಅಲ್ಲಿನ ವಾತಾವರಣ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಹೇಳಿದ ಅವರು, ಈ ಭಾಗದ ಎಲ್ಲರೂ ಸೇರಿ ಗುಲ್ಬರ್ಗ ವಿವಿಯ ಕೀರ್ತಿಯನ್ನು ಹೆಚ್ಚಿಸೋಣ. ಗುಲ್ಬರ್ಗ ವಿವಿ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here