ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಪ್ರಜ್ಞಾ ಸಂಸ್ಥಾ: ರೂಪಿಕಾ ದಾಸ್ ಅಭಿಮತ

0
100

ಕಲಬುರಗಿ: ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಅರ್ಪಿಸುವ ಮಕ್ಕಳ ಹೃದಯಾಂತರಾಳ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚಗೆ ಆನ್ ಲೈನ್ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಹಾಸ್ಯ ಭಾಷಣಕಾರರಾದ ಬಸವರಾಜ ಮಾಹಾಮನಿ ಮಾತನಾಡುತ್ತಾ ಮಕ್ಕಳ ಹೃದಯಾಂತರಾಳ ಒಂದು ಅತ್ಯತ್ತಮವಾದ ಕಾರ್ಯಕ್ರಮ, ನಾನು ಮಕ್ಕಳು ಕಳುಹಿಸಿದ ವಿಡಿಯೋಗಳನ್ನು ಗಮನಿಸಿದ್ದೇನೆ. ಕರ್ನಾಟಕದ ರಾಜ್ಯದ ಅನೇಕ ಮಕ್ಕಳು ತಮ್ಮ ಹೃದಯದ ಮಾತುಗಳನ್ನು ಹೇಳಿದ್ದಾರೆ. ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ದೇಶದ ವಾಸ್ತವಗಳನ್ನು ಅರೆತು ಅವುಗಳ ಪರಿಹಾರಕ್ಕೆ ಮಾರ್ಗಗಳನ್ನು ಕೂಡಾ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಜ್ಞಾ ಸಂಸ್ಥೆಯು ಕರ್ನಾಟಕದ ಶೈಕ್ಷಣಿಕ ಸುಧಾರಣೆ ಹಲವು ವಿಶೇಷ ಚಟುವಟಿಕೆ ಕಾರ್ಯಕ್ರಮಗಳ ಮೂಲಕ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳು ಭಾಷಣ ಮಾಡುವ ಮೂಲಕ ಕನ್ನಡ ಭಾಷಾ ಕಲಿಕೆ ಮಾರ್ಗವಾಗಲಿದೆ. ಕನ್ನಡ ಓದು ಬರಹದ ಜೊತೆಗೆ ಭಾಷಣದಂತಹ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾತುಗಳನ್ನು ಆಡುವುದು ಅದನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶಿಕ್ಷಣದಲ್ಲಿ ಭಾಷಣ ಕಲೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಇದರಿಂದ ಮಕ್ಕಳ ಶಿಕ್ಷಣ ಉತ್ತಮಗೊಳ್ಳುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಕೆ.ಎಂ.ವಿಶ್ವನಾಥ ಮರತೂರ ಪ್ರಜ್ಞಾ ಸಂಸ್ಥೆಯು ಈಗಾಗಲೇ ಮಕ್ಕಳಿಗಾಗಿ ಹಲವು ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸುತ್ತಿದೆ. ಮಕ್ಕಳ ಹೃದಯಾಂತರಾಳ ಒಂದು ವಿಶೇಷವಾದ ಸ್ಪರ್ಧೆಯಾಗಿದ್ದು ಮಕ್ಕಳ ಮನಸ್ಸನ್ನು ಅರೆಯುವ ಪ್ರಯತ್ನ ಮಾಡಲಾಗಿದೆ. ಅನೇಕ ವಿದ್ಯಾರ್ಥಿಗಳು ಅನೇಕ ಹೊಸ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಮಾತನಾಡಿ ಸಮಾಜದ ಕಣ್ಣು ತೆರೆಸುವ ತಮ್ಮ ಭಾಷಣದ ಮೂಲಕ ಮಾಡಿದ್ದಾರೆ.

ಪ್ರಜ್ಞಾ ಸಂಸ್ಥೆಯು ಒಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು, ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ಮಕ್ಕಳು, ಶಿಕ್ಷಕರು, ಯುವಕರು, ಸಮುದಾಯದ ಬಲವರ್ಧನೆಗಾಗಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ಮೂಲಕ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮವಾದ ಆರೋಗ್ಯ ಅಭಿವೃದ್ಧಿ, ಸಮುದಾಯಿಕ ಬಲವರ್ಧನೆ ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಪ್ರಸ್ತುತ ಹೃದಯಾಂತರಾಳ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ೮೮ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದೊಂದು ಉತ್ತಮವಾದ ಕಾರ್ಯಕ್ರಮ ಯಶಸ್ವೀಯಾಗಿದೆ ಎಂದರು.

ಮುಖ್ಯ ಅಥಿತಿಯಾಗಿ ಖ್ಯಾತ ಚಲನಚಿತ್ರ ನಟಿ ರೂಪಿಕಾ ದಾಸ್, ಮಾತನಾಡಿ ಮಕ್ಕಳು ಈ ದೇಶ ಆಸ್ತಿಯಾಗಿದ್ದಾರೆ, ಅವರಿಗೆ ಸೂಕ್ತವಾದ ವೇದಿಕೆಗಳನ್ನು ಕಲ್ಪಿಸಬೇಕು, ಪ್ರಜ್ಞಾ ಸಂಸ್ಥೆಯು ಈಗಾಗಲೇ ಅಂತಹ ಅನೇಕ ವಿಶೇಷವಾದ ವಿನೂತನವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಮಕ್ಕಳ ಮಾತುಗಳನ್ನು ನಾವೆಲ್ಲರೂ ಮನವಿಟ್ಟು ಕೇಳಬೇಕಿದೆ ಅವರ ಆಸಕ್ತಿಯನ್ನು ಅರೆತು ಪಾಠಮಾಡಬೇಕಿದೆ ಎಂದರು. ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಪ್ರತಿಭೆಗಳಿಗೆ ಪ್ರಜ್ಞಾ ಸಂಸ್ಥೆಯು ಉತ್ತಮವಾದ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಲ್ಲಯ್ಯ ಗುತ್ತೇದಾರ, ಸಾಹೇಬಗೌಡ ಬಿರಾದಾರ, ಮೌನೇಶ ನಾಲ್ಕಮನಿ, ಮಾಹಾಂತೇಶ, ತಮ್ಮಣ್ಣ ಹಿರೆಮನಿ ಮಾತನಾಡಿದರು. ಜೂನಿಯರ್ ಉಪೇಂದ್ರ (ಶೇಖರ ಸೇಡಂ) ಹಾಗೂ ಖ್ಯಾತ ಗಾಯಕ ರಿಯಾಜಪಟೇಲ್ ವರ್ಕನಹಳ್ಳಿ ಇದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿನಾಥ ಎಚ್.ಮರತೂರ ವಹಿಸಿದ್ದರು.

ಬಹುಮಾನ ಪಡೆದ ಮಕ್ಕಳ ವಿವರ: ಪ್ರಥಮ ಸ್ಥಾನವನ್ನು ಸಮೃದ್ಧಿ ಕುಂದಾಪುರ, ವರ್ಷಿಣಿ ಆರ್ ಬೆಂಗಳೂರು, ಸಾಕ್ಷಿ ತಂದೆ ಅಶೋಕ ಕಲಬುರಗಿ, ಇವರು ಹಂಚಿಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಪ್ರಜ್ಞಾ ಸಿ ತಂದೆ ಗಂಗಾಧರ ಯಾದಗಿರಿ, ಸಿಂಚನ.ಎಸ್. ಶಂಕರ್ ಬೆಂಗಳೂರು, ಸುಜಲಾ ವಿ. ಹೆಗಡೆ ಉತ್ತರಕನ್ನಡ, ಕಾವೇರಿ ತಂದೆ ಕಾಶಿನಾಥ ಬೀದರ, ಪ್ರಶಾಂತ ತಂದೆ ಸಂಗಣ್ಣಕಲಬುರಗಿ, ವರುಣಾ ಮೊಖಾಶಿ ಬಾಗಲಕೋಟೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here