ಶಿಕ್ಷಕರು ಮೌಲ್ಯ ಆಧಾರಿತ ಶಿಕ್ಷಣ ಕೊಡಬೇಕು: ಡಾ. ದಯಾನಂದ ಅಗಸರ

0
48

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಡಾ. ಅಂಬೇಡ್ಕರ ವಿಚಾರ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಸಿದ ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೋ. ದಯಾನಂದ ಅಗಸರ ರವರು ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ಲವಲವಿಕೆಯ ಸುಂದರ ಭವಿಷ್ಯ ನಿರ್ಮಾಣಕ್ಕೆ ಡಾ. ಅಂಬೇಡ್ಕರ ರವರ ತತ್ವಗಳನ್ನು ಅರಿಯುವುದು ಅವಶ್ಯಕ, ಏಕೆಂದರೆ ಡಾ. ಅಂಬೇಡ್ಕರ ರವರ ತತ್ವಗಳಲ್ಲಿ ರಾಷ್ಟ್ರಯತೆ, ಸ್ವಾತಂತ್ರ್ಯ, ಸಮಾನತೆ ಭಾತೃತ್ವ ಮತ್ತು ಶಿಕ್ಷಣದ ಪರಿಕಲ್ಪನೆಗಳು ಒಳಗೊಂಡಿವೆ. ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಅರಿತು ಬೋಧನೆ ಮಾಡಬೇಕು. ಕಲಬುರಗಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಡಾ. ಅಂಬೇಡ್ಕರ ಕಾಲೇಜು ಒಂದು ಅತ್ಯುತ್ತಮ ಶೈಕ್ಷಣಿಕ ಪರಿಸರ ಹೊಂದಿದೆ ಎಂದರು.

ಸಮಾರಂಭದ ಮುಖ್ಯ ಭಾಷಣಕಾರರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹುಮನಾಬಾದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯದೇವಿ ಗಾಯಕವಾಡ ರವರು ಭಾರತದಲ್ಲಿನ ಮೌಢ್ಯತೆಗಳನ್ನು ಅಳಿಸಲು ಕ್ರಿಸ್ತ ಪೂರ್ವ ೬ನೇ ಶತಮಾನದಲ್ಲಿ ತಥಾಗತ ಗೌತಮ ಬುದ್ಧ ೧೨ನೇ ಶತಮಾನದಲ್ಲಿ ಬಸವಣ್ಣ ೨೦ನೇ ಶತಮಾನದಲ್ಲಿ ಡಾ. ಅಂಬೇಡ್ಕರರವರು ತಮ್ಮ ಸಿದ್ಧಾಂತಗಳ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿದರು. ಭಾರತದಲ್ಲಿ ಒಂದು ಹೆಣ್ಣು ತಲೆಎತ್ತಿಕೊಂಡು ಓಡಾಡುತ್ತಿದ್ದಾಳೆ ಎಂದರೆ ಡಾ. ಅಂಬೇಡ್ಕರರೆ ಕಾರಣ. ಡಾ. ಅಂಬೇಡ್ಕರರ ಬದುಕೆ ಸ್ವಾಭಿಮಾನದ ಬದುಕು ಭಾರತದ ಸಂವಿಧಾನ ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವದ ತಳಹದಿಯ ಮೇಲೆ ರೂಪಗೊಂಡಿರುವ ಬಹುದೊಡ್ಡ ಸಂವಿಧಾನ ಎಂದಿದ್ದಾರೆ.

Contact Your\'s Advertisement; 9902492681

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ಪಿ.ಇ. ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆಯವರು ವಿದ್ಯಾರ್ಥಿಗಳು ಸಮಾಜ ಸುಧಾರಕರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಧೃಢ ಭಾರತವನ್ನು ನಿರ್ಮಿಸಬಹುದು ಎಂದರು. ಕಾಲೇಜಿನ ಪ್ರಾಚಾರ್ಯಾರಾದ ಡಾ. ಐ.ಎಸ್. ವಿದ್ಯಾಸಾಗರ ಸ್ವಾಗತ ಕೋರಿದರು.

ಕಾಲೇಜಿನ ಡಾ. ಅಂಬೇಡ್ಕರ ವಿಚಾರ ವೇದಿಕೆಯ ಸಂಯೋಜಕರಾದ ಡಾ. ಗಾಂಧೀಜಿ ಮೋಳಕೆರೆ ರವರು ಪ್ರಸ್ಥಾವಿಕ ಮಾತನಾಡಿದರು. ಸಮಾರಂಭದಲ್ಲಿ ಕೆಪಿಇ ಸಂಸ್ಥೆಯ ಹಿರಿಯ ಸದಸ್ಯರಾದ ಶ್ರೀ ಶಾಂತಪ್ಪ ಸೂರನ ಪ್ರೋ. ನಿರ್ಮಲಾ ಸಿರಗಾಪುರ ಪ್ರೋ ಸಿದ್ದಪ್ಪ ಎಂ. ಕಾಂತಾ, ಪ್ರೋ ಗೀರಿಶ ಮೀಸಿ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿಂದರು. ಪ್ರೋ. ಮಹಾಂತೇಶ ಬಿದನೂರು ಕಾರ್ಯಾಕ್ರಮ ನಿರೂಪಿಸಿದರು. ಪ್ರೋ ಅಂಬರಿಷ ದೇವರಗುಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here