ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ PWD ಕ್ಯಾಂಪ್ ನ ರಾಯಚೂರು ರಸ್ತೆಯಲ್ಲಿ ಇರುವ ಮಾಂಟೆಸ್ಸರಿ ಶಾಲೆಯ ಮುಖ್ಯಸ್ಥರಾದ ಸತೀಶ್ ಕುಮಾರ್ ಎನ್ನುವವರು ಶುಲ್ಕದ ವಿನಾಯಿತಿ ಕೇಳಿದ ಸಂಪತ್ ಕುಮಾರ ಎನ್ನುವ ವಿದ್ಯಾರ್ಥಿ, ಪಾಲಕರ ಮೇಲೆ ಪೋಲಿಸರ ಸಮ್ಮುಖದಲ್ಲೆ ಹಲ್ಲೆ ಮಾಡಿದ್ದು, ಖಂಡಿಸಿ, ಶಾಲೆಯ ಪರವಾನಿಗಿ ರದ್ದು ಪಡಿಸಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಎಸ್.ಎಫ್.ಐ ಸಂಘಟನೆಯ ಮುಖಂಡರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಸುಖ್ ದೇವ್ ರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪಾಲಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಸೂಕ್ತ ಶಿಕ್ಷೆಗೆ ಗುರಿಯಾಗಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಪಾವತಿಗೆ ಪಾಲಕರನ್ನು ಪೀಡಿಸದಂತೆ ಆದೇಶವನ್ನು ಹೊರಡಿಸಬೇಕು ಮತ್ತು ಡೊನೇಶನ್ ಹಾವಳಿ ನಿಯಂತ್ರಣ ಸಮಿತ ( ಡೇರಾ ಕಮಿಟಿ ) ಸಕ್ರೀಯಗೊಳಿಸಬೇಕೆಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ದೀನ ಸಮುದ್ರ, ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ ಬುಳ್ಳಾಪುರ, ಮಹೇಶ್ವರಿ, ಗೌರಿ ಸೇರಿದಂತೆ ಇತರರು ಇದ್ದರು.