ವಾಡಿ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಪ್ರದತ್ತವಾದ ಅಧಿಕಾರದಡಿ ವಾಡಿ-ಶಹಾಬಾದ ನಗರ ಯೋಜನಾ ಪ್ರಾಧೀಕಾರಕ್ಕೆ ಮುಂದಿನ ಮೂರು ವರ್ಷದ ಅವಧಿಗೆ ಸದಸ್ಯರನ್ನಾಗಿ ಬಿಜೆಪಿ ಎಸ್ಸಿ ಮೋರ್ಚಾ ಚಿತ್ತಾಪುರ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಅವರನ್ನು ನೇಮಿಸಲಾಗಿದೆ.
ಈ ಕುರಿತು ಫೆ.೬ ರಂದು ಅಧಿಕೃತ ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು, ಪ್ರಾಧೀಕಾರದ ಅಧ್ಯಕ್ಷ ಸ್ಥಾನ ಮತ್ತು ಎರಡು ಸದಸ್ಯ ಸ್ಥಾನಗಳನ್ನು ಶಹಾಬಾದ ನಗರಕ್ಕೆ ಮೀಸಲಿಟ್ಟು ಒಂದು ಸದಸ್ಯ ಸ್ಥಾನವನ್ನು ವಾಡಿ ನಗರಕ್ಕೆ ಒದಗಿಸಿದ್ದಾರೆ.