ವಾಡಿ: ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ನಿಧಿ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಜಿ ಶಾಸಕ ವಾಲ್ಮೀಕಿ ನಾಯಕ ಹಾಗೂ ಭಾಜಪ ಮುಖಂಡರು ಕಾರ್ಯಕರ್ತರ ಭಕ್ತಿದಾಯಕ ಶ್ರಮದಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆಂದು ಒಟ್ಟು ೬.೧೦,೩೮೧ ರೂ. ದೇಣಿಗೆ ಸಂಗ್ರಹಿಸಲಾಗಿದೆ.
ಸಂಗ್ರಹಗೊಂಡ ನಿಧಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಅಯೋಧ್ಯೆ ಖಾತೆಗೆ ಜಮೆ ಮಾಡಲಾಗಿದೆ ಎಂದು ನಿಧಿ ಜಮಾಕರ್ತ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ತಿಳಿಸಿದ್ದಾರೆ.