ಕಲಬುರಗಿ: ವಾರ್ಡ ನಂ ೪೬ರ ರಾಜಾಪುರದಲ್ಲಿ ಶಾಸಕರ ಅನುದಾನದಲ್ಲಿ ೫ ಲಕ್ಷ ರೂ. ವೆಚ್ಚದ ಯಲ್ಲಮ್ಮ ದೇವಸ್ಥಾನದ ಸಮುದಾಯ ಭವನದ ಭೂಮಿ ಪೂಜೆಯನ್ನು ಶಾಸಕರು ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಭಾನುವಾರ ಚಾಲನೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ವೀರಣ್ಣ ಹೊನಳ್ಳಿ, ಸಿದ್ದರಾಮ ಮಹಾಂತಗೊಳ, ಸಿದ್ದಣ ಬುಳ್ಳಾ, ಚನ್ನು ಬಿರಾದರ, ಮಲ್ಲಿಕಾರ್ಜುನ ಚೌಧರಿ, ಹಣಮಂತ ದೊಡ್ಡಮನಿ, ಭಿಮಾಶಾ ಮಾಶಳಕರ, ತಿಪ್ಪಣ್ಣ ವಡೇಯರಾಜ, ಭೀಮಾಶಂಕರ ಭಂಕೂರ, ಹಣಮಂತ ನಂದೂರ, ವಿಜಯಕುಮಾರ ದಾಬಿಮನಿ ಇದ್ದರು.