ಯಾದಗಿರಿ: ಸುರಪುರ ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳ ಅನಾಥ ಶವ ಪತ್ತೆಯಾಗಿದೆ.ಬಸ್ ನಿಲ್ದಾಣದ ಹೊರ ಆವರಣದಲ್ಲಿ ಶವ ಪತ್ತೆಯಾಗಿದ್ದು ಬೆಳಿಗ್ಗೆ ಅರೆನಗ್ನ ಸ್ಥಿತಿಯಲ್ಲಿ ಶವ ಇದ್ದಿದ್ದನ್ನು ಕಂಡು ಜನರು ಹಲವು ರೀತಿಯ ಅನುಮಾನ ವ್ಯಕ್ತಪಡಿಸಿದರು.ನಂತರ ನಗರಸಭೆ ಸಿಬ್ಬಂದಿಗಳು ಟ್ರ್ಯಾಕ್ಟರ್ ಮೂಲಕ ಸರಕಾರಿ ಆಸ್ಪತ್ರೆಗೆ ಶವ ಸಾಗಿಸಲಾಯಿತು.
ಮಧ್ಯಾಹ್ನದ ವರೆಗೂ ಶವವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು,ನಂತರ ಮದ್ಹ್ಯಾನದ ವೇಳೆಗೆ ಮೃತ ಮಹಿಳೆಯು ಹುಣಸಗಿ ತಾಲೂಕಿನ ಹೆಬ್ಬಾಳ ಬಿ.ಗ್ರಾಮದವಳೆಂದು ಗೊತ್ತಾಗಿದ್ದು ನಂತರ ಮೃತ ಮಹಿಳೆಯ ಸಂಬಂಧಿಗಳು ಬಂದು ಸುರಪುರ ಪೊಲೀಸ್ ಠಾಣೆಗೆ ಬಂದು ವಿವಿರಣೆ ನೀಡಿ ಶವವನ್ನು ತೆಗೆದುಕೊಂಡು ಹೋಗಿದ್ದಾರೆ.ಅನಾರೋಗ್ಯದಿಂದ ಮಹಿಳೆ ಸಾವನ್ನಪ್ಪಿರುವ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.