ಕಲಬುರಗಿ: ಟಿಎಸ್ಪಿ ಅನುದಾನದಲ್ಲಿ ನಗರದ ವಾರ್ಡ್ ನಂ.೨೩ ರ ಸುವರ್ಣ ನಗರದಲ್ಲಿ ರೂ.15 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕಿ ಕನೀಜ್ ಫಾತಿಮಾ ಅವರು ಬುಧವಾರ ಚಾಲನೆ ನೀಡಿದರು.
ಬಹಳ ದಿನದಿಂದ ಸುವರ್ಣ ನಗರದ ಜನರ ಕನಸಿತ್ತು ಸಿಸಿ ರಸ್ತೆ ಹಾಗೂ ಚರಂಡಿ ಟಿಎಸ್ಪಿ ಅನುದಾನದಲ್ಲಿ ರಸ್ತೆ ಚರಂಡಿ ಚಾಲನೆ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕಿ ಕನೀಜ್ ಫಾತಿಮಾ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಶರಣಮ್ಮ ಯಲ್ಲಪ್ಪ ನಾಯಿಕೋಡಿ, ಫರಾಜ್ ಉಲ್ ಇಸ್ಲಾಂ, ಆದಿಲ್ ಸುಲೇಮಾನ ಸೇಠ್, ಮಾಜಿ ಪಾಲಿಕೆ ಸದಸ್ಯ ಯಲ್ಲಪ್ಪ ನಾಯಿಕೋಡಿ, ಪ್ರಮೋದ ತಿವಾರಿ, ರಹಿಮ್, ಆಮೇಜ್ ಪಟೇಲ್, ಪ್ರಭಾಕರ ತೊರಣಗಿ, ಗುರುನಾಥ ನಂದರಗಿ, ಸಂಗಣ್ಣ ರಟಕಲ್, ಶಿವಾನಂದ ಸ್ವಾಮಿ, ಸಾಯಿಬಣ್ಣ ನಳದೆಳ್ಳಿ, ವಿಠಲ್ ಹೂಗಾರ, ಗುತ್ತೇದಾರ ಫಯಾಜ್ ಅಹ್ಮದ ಜಡಗಿ ಇದ್ದರು.