ಕಲಬುರಗಿ: ಜಿಲ್ಲೆಯ ಚಿತ್ತಾಪೂರು ತಾಲೂಕಿನಲ್ಲಿ ಇಂದು ಜಿಲ್ಲಾ ಪಂಚಾಯತ್ ಕಲಬುರಗಿ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ ಹಾಗೂ ರೂಢಾ ಸಂಸ್ಥೆ ಧಾರವಾಡ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ ಮಿಷನ ಹಾಗೂ ನಮ್ಮ ನಡಿಗೆ ತಾಜ್ಯ ಮುಕ್ತ ಕಡೆಗೆ ಕುರಿತಂತೆ ತಾಲೂಕು ಮಟ್ಟದ ಕಾರ್ಯಾಗಾರವನ್ನು ಚಿತ್ತಾಪೂರು, ಸೇಡಂ, ಮತ್ತು ಶಹಬಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಗೂಡುರು ಭೀಮಸೇನ್ ರವರು ಉದ್ಘಾಟಿಸಿ ಮಾತನಾಡುತ್ತ ಸರಕಾರದ ಯೋಜನೆಗಳು ಫಲಪ್ರದವಾಗಬೇಕಾದರೆ ಅಧಿಕಾರಿಗಳ ಹಾಗೂ ಗ್ರಾಮೀಣಭಾಗದ ಎಲ್ಲ ಭಾಗೀದಾರರ ಸಹಕಾರ ಅತ್ಯಗತ್ಯವೆಂದರು ಪ್ರತಿಯೊಂದು ಯೋಜನೆಯನ್ನು ಸರಿಯಾಗಿ ಅರಿತುಕೊಂಡು ಕಾರ್ಯನಿರ್ವಹಿಸಿದರೆ ಅದು ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ತಾಪೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕು.ನೀಲಗಂಗಾ ಬಬಲಾದ , ಶಹಬಾದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಮಣ ಶೃಂಗೇರಿ ರವರು ಹಾಗೂ ಚಿತ್ತಾಪೂರು ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗಂಗಾಧರ , ಸೇಡಂ ತಾಲೂಕಿನ ಗ್ರಾ.ಕು.ನೀ ಮತ್ತು ನೈ.ಇಲಾಖೆ ವಿಜಯಕುಮಾರ ಹಾಗೂ ಜಲ ಜೀವನ ಮಿಷನ ಯೋಜನೆಯ ಡಿಪಿಎಂ. ಡಾ.ರಾಜು ಕಂಬಾಳಿಮಠ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜನಾಧಿಕಾರಿ ಶ್ರೀಮತಿ ಗುರುಬಾಯಿ ಇಂಡಿ , ಚಿತ್ತಾಪೂರು ತಾಲೂಕು ಯೋಜನಾಧಿಕಾರಿ ಮುಬಾಷಿರ್ ಅಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಲ ಜೀವನ ಮಿಷನ್ , ಸ್ವಚ್ಛ ಭಾರತ ಮಿಷನ ,ಗ್ರಾಮನೀರು ನೈರ್ಮಲ್ಯ ಸಮಿತಿ ರಚನೆ ಕುರಿತು ಸುಧೀರ್ಘವಾಗಿ ಡಾ.ರಾಜು ಕಂಬಾಳಿಮಠ ಹಾಗೂ ಗುರುಬಾಯಿ ರವರು ತಿಳಿಸಿದರು. ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ ಸಮುದಾಯ ವಂತಿಕೆ ಹಾಗೂ ಗ್ರಾ.ಪಂ.ವಂತಿಕೆ ಅವಶ್ಯಕತೆ ಕುರಿತು ತಿಳಿಸಿದರೆ ಸಂಸ್ಥೇಯ ಇಂಜಿನಿಯರ್ ಆದ ಸಂಗಮೇಶ ಪಾಟೀಲ್ , ರಾಜಕುಮಾರ ಮತ್ತು ದೇವರಾಜ ರವರು ಗ್ರಾಮ ಕ್ರಿಯಾ ಯೋಜನೆ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ಸಂತೋಷ ಕೂಡಳ್ಳಿ ಹಾಗೂ ಮಂಜುನಾಥ ಕಂಬಾಳಿಮಠ ರವರು ಕ್ಷಯ ರೋಗದ ಕುರಿತು ತಿಳಿಸಿದರು. ರೂಡಾ ಸಂಸ್ಥೆಯ ಸಮಾಲೋಚಕರಾದ ಸುರೇಶ ಪಟ್ನಾಯಕ ಕಾರ್ಯಕ್ರಮ ನಿರೂಪಿಸಿದರು, ರಮೇಶ ಸಾವಳಗಿ ಸ್ವಾಗತಿಸಿದರು, ದೇವರಾಜ ರವರು ವಂದಿಸಿದರು.