ಎಂ.ಎಸ್.ಅಯ್. ಕಾಲೇಜಿನ ಸ್ವಯಂ ಸೇವಕರು ಸ್ವಚ್ ಸರ್ವೇಕ್ಷಣ ಜಾಥಾದಲ್ಲಿ ಭಾಗಿ

0
215

ಕಲಬುರಗಿ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಗುಲಬರ್ಗಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಕೋಶಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ಸ್ವಚ್ ಸರ್ವೇಕ್ಷಣ ಅಭಿಯಾನ 2021’ ರ ಜಾಥಾ ಕಾರ್ಯಕ್ರಮವು ನಗರದ ಜಗತ್ ವೃತದಿಂದ ಮಿನಿ ವಿಧಾನಸೌಧದ ವರೆಗೆ ಜರುಗಿತು.

ಈ ಜಾಥಾದಲ್ಲಿ ನಗರದ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಎನ್.ಎಸ್.ಎಸ್. ಘಟಕಗಳ ಕಾರ್ಯಕ್ರಮಧಿಕಾರಿಗಳದ ಡಾ. ಪ್ರೇಮಚಂದ ಚವ್ಹಾಣ, ಡಾ. ಪ್ರಾಣೇಶ್ ಎಸ್. ಅವರ ನೇತೃತ್ವದಲ್ಲಿ ಮಹಾವಿದ್ಯಾಲಯದಿಂದ ಜಗತ್ ವೃತ್, ಜಗತ್ ವೃತದಿಂದ ಮಿನಿ ವಿಧಾನಸೌಧ ಮತ್ತು ಮಿನಿ ವಿಧಾನಸೌಧ ದಿಂದ ಕಾಲೇಜಿನ ವರೆಗೆ ಜಾಥಾ ನಡೆಸಿ ನಗರದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸಿದರು.

Contact Your\'s Advertisement; 9902492681

ಈ ಜಾಥಾದಲ್ಲಿ ಕಾಲೇಜಿನ ಅಧ್ಯಾಪಕರುಗಳಾದ ಶಂಕರಪ್ಪ ಕಲಬುರಗಿ, ಬಸವಾಂತರಾವ್ ಪಾಟೀಲ್, ವಿಜಯಲಕ್ಷ್ಮಿ ವಾರದ, ಅಕ್ಷರ ಹಿರೇಮಠ, ಅಜಯ್ ಹೋಗಡೆ, ಶಿವಾನಂದ ಗುಳಗಿ ಜಾಥಾದಲ್ಲಿ ಪಾಲ್ಗೊಂಡರು.

ಮಹಾವಿದ್ಯಾಲಯದಿಂದ ಹೊರಟ ಜಾಥಾವನ್ನು ನಾಕ್ ಸಂಯೋಜಕರಾದ ಡಾ. ಎ. ಜಿ. ಪೊಲೀಸ್ ಪಾಟೀಲ್, ಡಾ. ರಾಜಶೇಖರ ಬಿರ್ನಳ್ಳಿ, ರೋಹಿಣಿಕುಮಾರ್ ಹಿಳ್ಳಿ ಯವರು ಸ್ವಯಂ ಸೇವಕರಿಗೆ ಶುಭಕೋರಿ ಹಸಿರು ನಿಶಾನೆ ತೋರಿಸಿದರು.

ಜಾಥದ ಆರಂಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿವರ್ಗ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here