ಕಲಬುರಗಿ: ಜಿಲ್ಲೆಯ ಅಫಜಲಪೂರ ತಾಲೂಕಿನ ವಿಧಾನ ಸಭಾ ಮತಕ್ಷೇತ್ರದ ತಾಲೂಕ ಸಂಯೋಜಕರಾಗಿ ನಿಂಗರಾಜ ಪೂಜಾರಿ ಆಯ್ಕೆ ಯಾಗಿದ್ದಾರೆ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ದೇವಿಂದ್ರ ಚಿಗರಳ್ಳಿ ಅವರು ತಿಳಿಸಿರುತ್ತಾರೆ.
ರಾಷ್ಟ್ರೀಯ ಸಮಾಜ ಪಕ್ಷದ ತತ್ವ ಸಿಧ್ಧಾಂತಗಳೊಂದಿಗೆ ಭದ್ದರಾಗಿ ಅತ್ಯಂತ ಕ್ರೀಯಾಶೀಲವಾಗಿ ಮುಂಬರುವ ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಎಮ್. ಎಲ್. ಎ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಲು ಇಂದಿನಿಂದಲೆ ಕಾರ್ಯೋನ್ಮುಖವಾಗಲು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶಿವಲಿಂಗಪ್ಪ ಕಿನ್ನೂರ ಕಾಕಾ, ಪ್ರೇಮ್ ಕೋಲಿ, ಸಿದ್ದು ಸರಡಗಿ ಹಾಗೂ ಸಿದ್ದು ಮುಸಂಡಿ ಇನ್ನಿತರರು ಉಪಸ್ಥಿತರಿದ್ದರು.