ಜಿಲ್ಲಾ ಆಸ್ಪತ್ರೆ: ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

2
171

ಕಲಬುರಗಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್.ಪಿ.ಪಿ.ಸಿ.ಡಿ. ಮತ್ತು ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ  ತಾಲೂಕು ಆಸ್ಪತ್ರೆ  ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿನ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮೆರಿಟ್-ಕಂ-ರೋಸ್ಟರ್ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ   ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿನ ಆಡಿಯೋಮೆಟ್ರಿಕ್ ಅಸಿಸ್ಟಂಟ್-01 ಹುದ್ದೆ ಹಾಗೂ ಆಳಂದ ತಾಲೂಕು ಆಸ್ಪತ್ರೆ ಮತ್ತು ಕಲಬುರಗಿ ಜಿಲ್ಲಾ ಆಸ್ಪತ್ರೆಯಗಳಲ್ಲಿನ ಆರ್.ಎಂ.ಎನ್.ಸಿ.ಹೆಚ್.+ಏ ಮಹಿಳಾ ಕೌನ್ಸಲರ್ ತಲಾ ಒಂದು (ಒಟ್ಟು 02 ಹುದ್ದೆಗಳಿಗೆ) ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಕುಟುಂಬ ಕಲ್ಯಾಣ ವಿಭಾಗದಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸದರಿ ಕಚೇರಿಯಲ್ಲಿ 2019ರ ಜೂನ್ 24 ರೊಳಗಾಗಿ ಸಲ್ಲಿಸಬೇಕು.

Contact Your\'s Advertisement; 9902492681

ವಿದ್ಯಾರ್ಹತೆ, ಮಾಸಿಕ ಸಂಭಾವನೆ ಹಾಗೂ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ, ಷರತ್ತು ಮತ್ತು ನಿರ್ಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278619 ಗೆ ಸಂಪರ್ಕಿಸಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಸಂಘದ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here