ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ: ಡಾ.ದೀಲಿಶ್ ಸಾಸಿ

0
42

ಕಲಬುರಗಿ: ಜಿಲ್ಲೆಯ ಜಿಲ್ಲಾ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ರೂಢಾ ಸಂಸ್ಥೆ ಧಾರವಾಡ ಹಾಗೂ ಸ್ವಚ್ಛ ಭಾರತÀ ಮಿಷನ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ ಮಿಷನ ಗುರಿ ಉದ್ಧೇಶ ಹಾಗೂ ನಮ್ಮ ನಡಿಗೆ ತಾಜ್ಯ ಮುಕ್ತ ಕುರಿತಂತೆ ಒಂದು ದಿನದ ತಾಲೂಕು ಮಟ್ಟದ ಕಾರ್ಯಾಗಾರವನ್ನು ಕಲಬುರಗಿ,ಕಮಲಾಪೂರು, ಮತ್ತು ಆಳಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಜಂಟಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವನ್ನು ಜಿಲ್ಲೆಗೆ ನೂತನಾಗಿ ಆಗಮಿಸಿದ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ದೀಲಿಶ್ ಸಾಸಿ ರವರು ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಬೇಕೆಂದರು.ಬೇಸಿಗೆಯ ಸಂದರ್ಭದಲ್ಲಿ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗುತ್ತದೆ ಇಂತಹ ಸಂದರ್ಭದಲ್ಲಿ ನೀರನ್ನು ಒದಗಿಸುವುದು ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ & ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನೀಯರಿಗಳಿಗೆ ದೊಡ್ಡ ಸವಾಲಾಗಿರುತ್ತದೆ ಆದ್ದರಿಂದ ಗ್ರಾಮಸ್ಥರು ಹೆಚ್ಚು ನೀರನ್ನು ಪೋಲು ಮಾಡದಂತೆ ಮಿತವಾಗಿ ಬಳಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಗೂಡುರು ಭೀಮಸೇನ್ ರವರು ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆ-ಮನೆಗೂ ನಳ ಸಂಪರ್ಕ ನೀಡಲಾಗುತ್ತದೆ ಹಾಗೂ ಪ್ರತಿಯೊಬ್ಬರಿಗೂ 55 ಎಲ್.ಪಿ.ಸಿ.ಡಿ ನಳದ ನೀರನ್ನು ಒದಗಿಸಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು .ಇದೇ ಸಂದರ್ಭದಲ್ಲಿ ನೈರ್ಮಲ್ಯದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋದೀಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ ಅಥಿತಿಗಳಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಹಮ್ಮದ ಅಜೀಜುದ್ದೀನ್ ರವರು ಮಾತನಾಡುತ್ತ ಪ್ರಸ್ತುತ 2020-21 ನೇ ಸಾಲಿನಲ್ಲಿ 380 ಕಾಮಗಾರಿಗಳನ್ನು ಜಲ ಜೀವನ ಮಿಷನ್ ಅಡಿಯಲ್ಲಿ ತೆಗೆದುಕೊಂಡು 243 ಕಾಮಗಾರಿಗಳು ಟೆಂಡರ್ ಸಹ ಆಗಿದ್ದು ಪ್ರತಿಯೊಬ್ಬ ಗ್ರಾಮಸ್ಥರು ನಳದ ಸದುಪಯೋಗ ಪಡೆದುಕೊಳ್ಳಬೆಕೆಂದರು. ಕಾರ್ಯಕ್ರಮದ ತಾಲೂಕು ಸಹಾಯಕ ಕೃಷಿ ಅಧಿಕಾರಿ ಚಂದ್ರಕಾಂತ ಜೀವಣಗಿ ರವರು ನೀರಿನ ಸುಸ್ಥಿರತೆಗೆ ಮತ್ತು ಸಂರಕ್ಷಣೆಗೆ ಕೃಷಿಹೊಂಡ, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೆಕೆಂದು ತಿಳಿಸಿದರು.

ಜಿಲ್ಲಾ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಲಕ್ಷ್ಮೀನಾರಯಣ ರವರು ಮಳೆ ನೀರು ಸಂರಕ್ಷಣೆ ಮಾಡಿದರೆ ಮಾತ್ರ ನಾವು ಮುಂದಿನ ಪೀಳಿಗೆಗೆ ನೀರನ್ನು ಉಳಿಸಬಹುದು ಇಲ್ಲದೆ ಹೋದಲ್ಲಿ ಕೊಳವೆ ಬಾವಿಗಳಲ್ಲಿಯು ಸಹ ನೀರಿನ ಅಭಾವ ಉಂಟಾಗುತ್ತದೆ ಎಂದರು. ವೇದಿಕೆಯ ಮೇಲೆ ಕಲಬುರಗಿ ಹಾಗೂ ಕಮಲಾಪೂರು ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನಪ್ಪ ಕಟ್ಟಿಮನಿ ಹಾಗೂ ಆಳಂದ ಕಾರ್ಯನಿರ್ವಾಹಕ ಅಧಿಕಾರಿಯಾದ ನಾಗಮೂರ್ತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲಬುರಗಿ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಅಬ್ದುಲ್ ಮನ್ನಾ ಹಾಗೂ ಆಳಂದ ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರಾದ ಚಂದ್ರಮೌಳಿ ರವರು, ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ & ಪ್ರಾಸ್ತವಿಕ ನುಡಿಯನ್ನು ಜಲ ಜೀವನ ಮಿಷನ ಡಿಪಿಎಂ. ಡಾ.ರಾಜು ಕಂಬಾಳಿಮಠ ಮಾತನಾಡಿದರು, ರಮೇಶ ಸಾವಳಗಿ ನಿರೂಪಿಸಿದರು, ರೂಡಾ ಸಂಸ್ಥೇ ಧಾರವಾಡ ತಂಡದ ನಾಯಕರಾದ ಸಂತೋಷ ಮೂಲಗೆ ವಂದಿಸಿದರು.

ಕಾರ್ಯಾಗಾರದಲ್ಲಿ ವಿವಿಧ ಉಪನ್ಯಾಸಗಳಲ್ಲಿ ಜಲ ಜೀವನ ಮಿಷನ್ ಗುರಿ ಉದ್ದೇಶ ಕುರಿತು ಡಾ.ರಾಜು ಎಂ., ಸಮುದಾಯ ವಂತಿಕೆ ಹಾಗೂ ಗ್ರಾ.ಪಂ.ವಂತಿಕೆ ಅವಶ್ಯಕತೆ ಕುರಿತು ಶರಣಬಸವ ಮೂಲಗೆ ತಿಳಿಸಿದರೆ, ಶಿವಾನಂದ ಪವಾರ್ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ರಚನೆ ಕುರಿತು ತಿಳಿಸಿದರು, ದೇವರಾಜ ರವರು ನೀರಿನ ಸುಸ್ಥಿರತೆ ಕುರಿತು ಉಪನ್ಯಾಸ ನೀಡಿದರೆ, ಗ್ರಾಮ ಪಂಚಾಯತನಲ್ಲಿ ನೀರಿನ ಪರೀಕ್ಷೆ ಮಾಡುವ ವಿಧಾನವನ್ನು ಕೆಮಿಷ್ಟಗಳಾದ ಶ್ರೀಮತಿ ರಾಚಮ್ಮ ಹಾಗೂ ಸಾಯಬಣ್ಣ ರವರು ಪ್ರಾತ್ಯಕ್ಷಿತೆ ತೋರಿಸಿದರು.

ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ ಪಾಪರಡ್ಡಿ, ಮಲ್ಲಿಕಾರ್ಜುನ ಕುಂಬಾರ ಘನ ಮತ್ತು ದ್ರವ ತ್ಯಾಜ್ಯ ಹಾಗೂ ಶೌಚಾಲಯದ ಬಳಕೆ ಮತ್ತು ನಿರ್ಮಾಣದ ಕುರಿತು ಉಪನ್ಯಾಸ ನೀಡಿದರು.ಸಂಸ್ಥೇಯ ಇಂಜಿನಿಯರ್ ಆದ ಸಂಗಮೇಶ ಪಾಟೀಲ್ , ರಾಜಕುಮಾರ ಮತ್ತು ಶ್ರವಣಕುಮಾರ ರವರು ಜಲ ಜೀವನ ಮಿಷನ್ ಗ್ರಾಮ ಕ್ರಿಯಾ ಯೋಜನೆ ಕುರಿತು ತಿಳಿಸಿದರು. ರೂಡಾ ಸಂಸ್ಥೆಯ ಸಮಾಲೋಚಕರಾದ ಸುರೇಶ ಪಟ್ನಾಯಕ ರಮೇಶ ಸಾವಳಗಿ ಯೋಜನೆಯಲ್ಲಿ ಸರಕಾರೇತರ ಸಂಸ್ಥೆಯ ಪಾತ್ರ ಕುರಿತು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here