ನಿಷ್ಠಾವಂತ ಪೊಲೀಸ್ ಶಿವೈಕ್ಯ ನಾಗಪ್ಪ ಜೇನವೆರಿ, ಲಿಂ. ಕಾಶಿಬಾಯಿ ದತ್ತಿ ಉಪನ್ಯಾಸ

0
186

ಕಲಬುರಗಿ: ೧೨ನೇ ಶತಮಾನದಲ್ಲಿ ಜರುಗಿದ ವಚನ ಚಳುವಳಿಯ ನೇತ್ರತ್ವ ವಹಿಸಿದ ಬಸವಣ್ಣ ತನ್ನ ೮ನೇ ವಯಸ್ಸಿನಲ್ಲೆ ಒಂದು ಹೊಸ ಕಲ್ಪನೆಯೊಂದಿಗೆ ಪ್ರಶ್ನೆ ಮಾಡುವುದರ ಮೂಲಕ ಸಮಾನತೆಯ ಬೀಜ ಬಿತ್ತಿದ ಮೊದಲ ಸಮಾಜ ಸುಧಾರಕ ಹಾಗು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟ ಜಗತ್ತಿನ ಮೊದಲ ವ್ಯಕ್ತಿ ಎಂದು ನಿವೃತ್ತ್ ಉಪನ್ಯಾಸಕ ಡಾ. ಕೆ.ಎಸ್ ಬಂಧು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ವತಿಯಿಂದ ಹಮ್ಮಿಕೊಂಡ ಮಹಾನಗರದ ಜಿ.ಡಿ.ಎ. ಲೇಔಟ್ ಗೋಕುಲ ನಗರದಲ್ಲಿರುವ ಅನ್ನಪೂರ್ಣ ಹಾಗರಗಿ ಅವರ ವಿದ್ಯಾಸಂಸ್ಥೆಯ ಪ್ರೌಢ ಶಾಲೆಯಲ್ಲಿ ನಡೆದ ನಿಷ್ಠಾವಂತ ಪೊಲೀಸ್ ಶಿವೈಕ್ಯ ನಾಗಪ್ಪ ಜೇನವೆರಿ ಹಾಗು ಲಿಂ. ಕಾಶಿಬಾಯಿ ದತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಕೆ.ಎಸ್ ಬಂಧು ಅವರು ಮಾತನಾಡುತ್ತಾ ಶರಣರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಮೇಲೆ ಮಕ್ಕಳಿಗೆ ಕಲ್ಪನೆ ಮೂಡುವಂತೆ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಶರಣರ ವಚನ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ ಎಂಬುದು ಪ್ರಮುಖ ಮತ್ತು ಸುಭದ್ರ ತತ್ವ ಅಡಗಿದೆ ಎಂದು ತಿಳಿಸದರು. ಮುಖ್ಯ ಅತಥಿಗಳಾಗಿ ಪಾಲ್ಗೊಂಡ ಯುವ ಘಟಕದ ಅಧ್ಯಕ್ಷರಾದ ಶಿವರಾಜ ಅಂಡಗಿ ಅವರು ಮಾತನಾಡುತ್ತಾ ನಮ್ಮ ನಮ್ಮ ಹಿರಿಯರ ಒಳ್ಳೆಯ ಆದರ್ಶ ಗುಣಗಳು ಹಾಗು ಮಾತುಗಳನ್ನು ತಿಳಿದುಕೊಂಡರೆ ನಮ್ಮ ಮನೆತನದ ಹಿರಿಯರು ಸಮಾಜಕ್ಕೆ ಏನು ಕೊಡುಗೆ ಕೊಟ್ಟು ಹೋಗಿದ್ದಾರೆ ಎಂದು ತಿಳಿಯುತ್ತದೆ. ಮತ್ತು ಪ್ರತಿಯೊಬ್ಬರಲ್ಲಿ ಒಂದು ಒಳ್ಳೆಯ ಗುಣವಿರುತ್ತದೆ. ಅದನ್ನು ಬೆಳಕಿಗೆ ತಂದು ಮುಂದಿನ ಪೀಳಿಗೆಗೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ದತ್ತಿ ಉಪನ್ಯಾಸ ಹಮ್ಮಿಕೊಳ್ಳುವದರ ಮೂಲಕ ಪ್ರಚಾರಗೈಯಬೇಕೆನ್ನುವುದೆ ನಮ್ಮ ಕಾರ್ಯವಾಗಿದೆ. ಅದು ಅಲ್ಲದೆ ಇಂದು ತಮ್ಮ ತಮ್ಮ ಮನೆಗಳಿಗೆ ತೆರಳಿದ ನಂತರ ನಿಮ್ಮ ಪಾಲಕರಿಗೆ ಪೂರ್ವಜರ ಆದರ್ಶ ಗುಣ ಹಾಗು ವ್ಯಕ್ತತ್ವದ ಬಗ್ಗೆ ಮಾಹಿತಿ ಕಲೆ ಹಾಕಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರೊ. ಕುಪೇಂದ್ರ ಪಾಟೀಲ, ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳವಣಿಗೆ ಹಾಗು ಶರಣ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ ಮಾಡುತ್ತಿರುವ ರಾಜ್ಯದ ಪ್ರತಿಷ್ಟಿತ ಪರಿಷತ್ತಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜ್ಞಾನ ಜ್ಯೋತಿ ಪ್ರೌಢ ಶಾಲೆಯ ಆಡಳಿತಾಧಿಕಾರಿಯಾದ ಕಾಶಿನಾಥ ಚಿಳ್ಳ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಡಾ. ಶರಣಬಸಪ್ಪ ವಡನಕೇರಿ, ದತ್ತಿ ದಾಸೋಹಿಗಳಾದ ನ್ಯಾಯವಾದಿ ವಿನೋದಕುಮಾರ ಜೇನವೆರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮೊದಲಿಗೆ ಪ್ರೌಢ ಶಾಲೆಯ ವಿದ್ಯಾರ್ಥಿನಿಗಳಾದ ಮಂಜುಶ್ರೀ, ಪ್ರಿಯಂಕಾ ಪ್ರಾರ್ಥನೆಗೈದರು ಶಾಲೆಯ ಶಿಕ್ಷಕ ಮಂಜುನಾಥ ಸುತ್ತಾರ ನಿರೂಪಿಸಿದರು ಕಾರ್ಯದರ್ಶಿ ಶಿವಾನಂದ ಮಠಪತಿ ಶರಣು ಸಮರ್ಣಪಣೆ ಮಾಡಿದರು. ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here