ಬೆಂಗಳೂರು: ಪ್ರೇಮಿಗಳ ಹಬ್ಬ – ವ್ಯಾಲಂಟೈನ್ಸ್ ಡೇಯನ್ನು ಮತ್ತಷ್ಟು ವಿಶೇಷ ಗೊಳಿಸುವ ಉದ್ದೇಶದಿಂದ ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 14 – ವ್ಯಾಲಂಟೈನ್ ಡೇ – ಪ್ರೇಮಿಗಳ ದಿನಕ್ಕೆ ಅದರದೇ ಆದ ವಿಶೇಷತೆ ಇದೆ. ತಮ್ಮ ಸಂಗಾತಿಗೆ ವಿಶೇಷವಾದ ಕೊಡುಗೆಯನ್ನು ಕೊಡುವ ಮೂಲಕ ಬಹುತೇಕ ಪ್ರೇಮಿಗಳು ಇದನ್ನು ಆಚರಿಸುತ್ತಾರೆ. ಸಂಗಾತಿಗೆ ವಿಶಿಷ್ಟವಾದ ಕೊಡುಗೆಯನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುವ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಫೆಬ್ರವರಿ 14 ರ ವರೆಗೆ ದ ಸೋಕ್ ಮಾರ್ಕೇಟ್ – ಆರ್ಟ್ ಅಂಡ್ ಕ್ರಾಫ್ಟ್ ಮೇಳವನ್ನು ಆಯೋಜಿಸಲಾಗಿದೆ.
ಕರಕುಶಲ ವಸ್ತು ಪ್ರದರ್ಶನ ಹಾಗೂ ಮರಾಟ ಮೇಳದ ಆಯೋಜಕ ಅಫ್ತಾಬ್ ಮಾತನಾಡಿ, ಚಿತ್ತಾರ – ಗ್ರಾಂಡ್ ಫ್ಲಿಯಾ ಮಾರ್ಕೇಟ್ ಸಹಯೋಗದಲ್ಲಿ ಆಯೋಜಿಸಿರುವ ಈ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ, ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ವ್ಯಾಲಂಟೈನ್ಸ್ ಡೇ ಗೆ ಕೊಡುಗೆ ನೀಡಲು ಅಗತ್ಯವಿರುವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ. ಎಲ್ಲಾ ರೀತಿಯ ಉಡುಗೊರೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ, ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್ ಲೂಮ್ ಸ್ಯಾರಿಯನ್ನು ಸೆಲೆಕ್ಟ್ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ