ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಡಾ. ಮಲ್ಲಿಕಾರ್ಜುನ ಖರ್ಗೆ: ಡಾ. ಅಜಯ್ ಸಿಂಗ್ ಸಂತಸ

0
39

ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ  ಮುತ್ಸದ್ದಿ ರಾಜಕಾರಣಿ, ಸ್ಟೇಟ್ಸ್‍ಮನ್, ಹಿರಿಯ ಮುಖಂಡರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವದು ಕರ್ನಾಟಕಕ್ಕೆ, ಅದರಲ್ಲೂ, ಕಲಬುರಗಿಗೆ, ಕಲ್ಯಾಣ ನಾಡಿಗೆ ಇದೊಂದು ಅತ್ಯಂತ ಹೆಮ್ಮೆಯ ಕ್ಷಣ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ  ಡಾ. ಅಜಯ್ ಸಿಂಗ್ ಬಣ್ಣಿಸಿದ್ದಾರೆ.

ರಾಜ್ಯಸಭೆಯ ವಿರೋಧ ಪP್ಷÀದ ನಾಯಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜಕೀಯದ ಅವರ ಸುದೀರ್ಘ ಅನುಭವವು  ರಾಜ್ಯಸಭೆಯ ಘನತೆ ಹೆಚ್ಚಿಸುವ ವಿಶ್ವಾಸವಿದೆ. ಹಾಲಿ ಸರ್ಕಾರದ ಜನ ವಿರೋಧಿ ನೀತಿಯನ್ನು ಗಟ್ಟಿ ಧ್ವನಿಯಲ್ಲಿ ಎದುರಿಸುವ ಆಯ್ಕೆ ಸಂತಸ ತಂದಿದೆ ಎಂದಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕಕ್ಕೆ, ಅದರಲ್ಲೂ ಕಲಬುರಗಿಗೆ ಇದೊಂದು ಸಂತಸದ ಹಾಗೂ ಆಚರಣೆಯ ಸಮಯವಾಗಿದೆ. ಶಾಸಕರಾಗಿ, ಸಂಸದರಾಗಿ, ಪಕ್ಷದಲ್ಲಿ ಹಾಗೂ ಸರಕಾರಗಳಲ್ಲಿ ಹತ್ತು ಹಲವು ಮಹತ್ವದ ಹುದ್ದೆಗಳಲ್ಲಿದ್ದು ಸದಾಕಾಲ ಪ್ರಗತಿ ಮಂತ್ರ ಪಠಿಸುತ್ತಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದರಿಂದ ಇನ್ನೂ ಹೆಚ್ಚಿನ ಬಲ ನಮ್ಮ ಭಾಗಕ್ಕೆ ಬಂದಂತಾಗಿದೆ ಎಂದಿದ್ದಾರೆ.

ಕೇಂದ್ರ ಪ್ರಾಯೋಜಿತ ಅನೇಕ ಯೋಜನೆಗಳು ಕೈ ಬಿಟ್ಟು ಹೋಗುತ್ತಿವೆ, ನೆನೆಗುದಿಗೆ ಬಿದ್ದಿವೆ, ಈ ಹಂತದಲ್ಲಿ ಖರ್ಗೆಯವರು ರಾಜ್ಯಸಭೆಯಲ್ಲಿ ಪ್ರಮುಖ ಹಾಗೂ ಅತ್ಯಂತ ಮಹತ್ವದ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರುವದರಿಂದ ನಮ್ಮ ಭಾಗಕ್ಕೆ ಬರುವ ದಿನಗಳಲ್ಲಿ ನ್ಯಾಯ ದೊರಕಲಿದೆ ಎಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here