ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ

0
32

ಸುರಪುರ: ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು,ತಾಲೂಕಿನ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗದ ಕಾರಣ ಜನರು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ,ಈಗ ಗುಳೆ ಹೋಗಿರುವ ಜನರಿಗೆ ನಗರ ಪ್ರದೇಶಗಳಲ್ಲಿ ಕೆಲಸವಿಲ್ಲದೆ ಮರಳಿ ತಮ್ಮ ಊರುಗಳಿಗೆ ಬರುತ್ತಿದ್ದಾರೆ,ಅವರೆಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸವನ್ನು ನೀಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಇನ್ನೂ ಸರಕಾರ ಉದ್ಯೋಗ ಖಾತ್ರಿ ಕಾಮಗಾರಿಗೆ ಪ್ರತಿಬಾರಿಗಿಂತ ಈಬಾರಿ ಅನುದಾನದಲ್ಲಿ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ,ಕಳೆದ ಸಾಲಿನಲ್ಲಿ ಒಟ್ಟು ೧ಲಕ್ಷದ ೧ಸಾವಿರದ ೫ನೂರು ಕೋಟಿ ರೂಪಾಯಿಗಳನ್ನು ಉದ್ಯೋಗ ಖಾತ್ರಿಗೆ ನೀಡಲಾಗಿತ್ತು,ಆದರೆ ಈಬಾರಿ ಕೇವಲ ೭೩ ಸಾವಿರ ಕೋಟಿ ಘೋಷಣೆ ಮಾಡುವ ಮೂಲಕ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದೆ,ಕೂಡಲೆ ೨ಲಕ್ಷ ಕೋಟಿ ಅನುದಾನ ನೀಡಬೇಕು ಎಂದು ನಮ್ಮ ಸಂಘ ಆಗ್ರಹಿಸುತ್ತದೆ,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೃಷಿ ಕೂಲಿಕಾರರ ಸಂಘ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಶರಣಬಸವ ಜಂಬಲದಿನ್ನಿ ರಾಜು ದೊಡ್ಮನಿ ಖಾಜೆಸಾಬ್ ದಳಪತಿ ಅಯ್ಯಪ್ಪ ಬಾಚಿಮಟ್ಟಿ ವಿರೇಶ ಕವಡಿಮಟ್ಟಿ ಮಲ್ಲು ಹುಲಿಮನಿ ರಂಜಾನಸಾಬ್ ಕನ್ನೆಳ್ಳಿ ಸುರೇಂದ್ರ ಮಂಗಿಹಾಳ ಲಾಲಸಾಬ್ ಮಂಗಳೂರು ಲಕ್ಷ್ಮೀ ಭಜಂತ್ರಿ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here