ಸುರಪುರ: ದೇಶದ ರೈತರನ್ನು ಸರ್ವನಾಶ ಮಾಡಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ರದ್ದು ಮಾಡುವ ವರೆಗೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ,ಕಾಂಗ್ರೆಸ್ ದೇಶವನ್ನು ರಕ್ಷಿಸುವ ಪಕ್ಷವಾದರೆ ಬಿಜೆಪಿ ದೇಶವನ್ನು ಹಾಳು ಮಾಡುವ ಪಕ್ಷವಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ದೆಹಲಿಯಲ್ಲಿ ಸುಮಾರು ೭೫ ದಿನಗಳಿಂದ ರೈತರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ,ಅಲ್ಲದೆ ೧೫೦ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ, ಆದರೆ ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಪ್ರಯತ್ನ ಮಾಡದೆ ನಾಟಕವಾಡುತ್ತಿದೆ,ಅಲ್ಲದೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ ಇದರಿಂದ ಜನ ಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲಾಗದೆ ಪರದಾಡುವಂತಾಗಿದೆ.ಇನ್ನು ಹಿಂದೆ ನಮ್ಮ ಕಾಂಗ್ರೆಸ್ ನೇತೃತ್ವದ ಸರಕಾರವಿದ್ದಾಗ ಕಚ್ಚಾ ತೈಲ ಬೆಲೆ ೧೨೦ ರೂಪಾಯಿಗಿಂತಲು ಅಧಿಕವಾಗಿದ್ದಾಗ ಪೆಟ್ರೋಲ್ ಬೆಲೆ ೬೦ ರೂಪಾಯಿಗಳ ಆಸುಪಾಸಿನಲ್ಲಿತ್ತು,ಆದರೆ ಈಗ ಕಚ್ಚಾ ತೈಲ ಬ್ಯಾರಲ್‌ಗೆ ೬೦ ರೂಪಾಯಿ ಇರುವಾಗ ಪೆಟ್ರೋಲ್ ಬೆಲೆ ೯೨ ರೂಪಾಯಿಯಾಗಿದೆ,ಆದರೂ ನರೇಂದ್ರ ಮೋದಿ ದೇಶ ಅಭಿವೃಧ್ಧಿ ಮಾಡಿದ್ದೇವೆ ಎಂದು ಮಾತನಾಡುವುದು ನಾಟಿಕೆಗೇಡಿನ ಸಂಗತಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಯಾವತ್ತೂ ಬಡವರು ದೀನ ದಲಿತರು ಮತ್ತು ಮುಖ್ಯವಾಗಿ ರೈತರ ಜೊತೆಗಿರುವ ಪಕ್ಷವಾಗಿದೆ,ನಾನು ಹಿಂದೆ ರೈತರಿಗಾಗಿ ಸುರಪುರ ದಿಂದ ನಾರಾಯಣಪುರದ ವರೆಗೆ ಪಾದಾಯಾತ್ರೆ ಮಾಡಿ ರೈತರ ಬೆಳೆಗೆ ನೀರು ತಂದಿರುವೆ ಮುಂದೆಯೂ ರೈತರಿಗಾಗಿ ಮತ್ತೆ ಪಾದಯಾತ್ರೆ ಮಾಡಲು ಸದಾ ಸಿದ್ಧವಿರುವುದಾಗಿ ಘೋಷಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ಅಹ್ಮದ್ ಪಠಾಣ್ ಮಾನಪ್ಪ ಸೂಗುರು ಸೂಗುರೇಶ ವಾರದ್ ವೆಂಕಟೇಶ ಬೇಟೆಗಾರ ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಜಾ ಕುಮಾರ್ ನಾಯಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.
ಇದಕ್ಕು ಮುನ್ನ ನಗರದ ವಸಂತ ಮಹಲ್ ಕಾಂಗ್ರೆಸ್ ಕಚೇರಿಯಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ತಹಸೀಲ್ ಕಚೇರಿ ವರೆಗೆ ನೂರಾರು ಸಂಖ್ಯೆಯ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ರೂಪಕುಮಾರ ನಾಯಕ ರಾಜಾ ವೇಣುಗೋಪಾಲ ನಾಯಕ ನಿಂಗಣ್ಣ ಬಾದ್ಯಾಪುರ ಮಲ್ಲಣ್ಣ ಸಾಹು ಮುದೋಳ ರಮೇಶ ದೊರೆ ಆಲ್ದಾಳ ಮಾನಪ್ಪ ಸಾಹುಕಾರ ರಾಜಾ ಸುಶಾಂತ ನಾಯಕ ರಾಜಾ ವಿಜಯಕುಮಾರ ನಾಯಕ ರವಿಚಂದ್ರ ಸಾಹುಕಾರ ದಾನಪ್ಪ ಕಡಿಮನಿ ಶಿವಮೋನಯ್ಯ ನಾಯಕ ದಾನಪ್ಪ ಕಡಿಮನಿ ಮಹೇಶ ಯಾದವ್ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಭೀಮು ನಾಯಕ ಮಲ್ಲಿಬಾವಿ ಭೀಮಣ್ಣ ನಾಗನಟಿಗಿ ಧರ್ಮಣ್ಣ ದೊರೆ ಅಶೋಕ ಸಜ್ಜನ್ ಚನ್ನಪ್ಪಗೌಡ ದೇವಾಪುರ ಸೇರಿದಂತೆ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರಿದ್ದರು.