ಸರಕಾರಿ ಆಸ್ಪತ್ರೆ ಹೆಚ್ಚುವರಿ ಕೋಣೆ ನಿರ್ಮಾಣಕ್ಕೆ ಚಾಲನೆ

0
71

ಆಳಂದ: ಪಟ್ಟಣದ ಮಂಟಕಿ ರಸ್ತೆಯಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಇಲಾಖೆಯ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಸರ್ಕಾರದ ಅನುದಾನದಿಂದ ಕೈಗೊಳ್ಳುವ ಆಸ್ಪತ್ರೆ ಕೋಣೆಗಳ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಿಗದಿತ ಅವಧಿಯಲ್ಲಿ ಕೈಗೊಂಡು ಆಸ್ಪತ್ರೆಯ ಸುವ್ಯವಸ್ಥೆಗೆ ಅನುಕೂಲ ಒದಗಿಸಬೇಕು. ಈ ಕಾಮಗಾರಿಯ ಗುಣಮಟ್ಟತೆ ಕಾಯ್ದುಕೋಳ್ಳಲು ಆಸ್ಪತ್ರೆಯ ಸಿಬ್ಬಂದಿಗಳು ನಿಗಾವಹಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

Contact Your\'s Advertisement; 9902492681

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಭಿನಂದನ ಬೇಡಗೆ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಯೂಸೂಫ್ ಅನ್ಸಾರಿ, ಅಪ್ಪಾಸಾಹೇಬ ಗುಂಡೆ, ಶಂಕರರಾವ್ ಪಾಟೀಲ ತೀರ್ಥ, ಕಿಣ್ಣಿಸುಲ್ತಾನ ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಿಬೂಬ ತೆಲಾಕುಣಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here