ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಅನುಚಿತ ವರ್ತನೆ ಪೋಷಕರು, ಗ್ರಾಮಸ್ಥರ ಆಕ್ರೋಶ

0
180

ಜಮಖಂಡಿ: ಪ್ರತಿನಿತ್ಯ ವಿದ್ಯಾರ್ಥಿನಿಯ ಕೆನ್ನೆ ಹಿಂಡುವ ಮೂಲಕ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ನಡೆಸಿದ ಪ್ರಕರಣ ತಾಲ್ಲೂಕಿನ ಗೋಠೆ  ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.

ಎಲ್ ವಿ ಅವಟಿ ಕೃತ್ಯ ವೆಸಗಿದ ಶಾಲಾ ಶಿಕ್ಷಕ, ಗೋಠೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ ಇತ, ಪ್ರತಿನಿತ್ಯ ವಿದ್ಯಾರ್ಥಿನಿ ಕೆನ್ನೆ ಹಿಂಡುವ ಮೂಲಕ ಅಸಭ್ಯ ವರ್ತನೆ ತೋರುತ್ತಿದ್ದು, ವಿದ್ಯಾರ್ಥಿನಿ ಶಿಕ್ಷಕನ ವರ್ತನೆಗೆ  ಮನನೊಂದು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಶಿಕ್ಷಕನ ಕೃತ್ಯದ ಕುರಿತು ಆಕ್ರೋಶಗೊಂಡು ಗ್ರಾಮಸ್ಥರ ಹಾಗೂ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕನ ಅಮಾನತು ಹಾಗೂ ವರ್ಗಾವಣೆಗೆ ಒತ್ತಾಯಿಸಿದರು.

Contact Your\'s Advertisement; 9902492681

ಗ್ರಾಮಸ್ಥರು ಶಾಲೆಗೆ ಬರುತ್ತಿದ್ದಂತೆ ಶಿಕ್ಷಕ ಶಾಲೆಯಿಂದ ಪರಾರಿಯಾಗಿದ್ದಾನೆಂದು ತಿಳಿದು ಬಂದಿದ್ದು, ಸ್ಥಳಕ್ಕೆ ಜಮಖಂಡಿ ಬಿಇಓ ಭೇಟಿ ನೀಡಿ ಘಟನೆ ಕುರಿತುವಿಚಾರಣೆ ನಡೆಸಿ ಮಾಹಿತಿ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here