ಕಾದಂಬರಿ ವಿವಿಧ ವಿಭಾಗಳಲ್ಲಿ ಅಧ್ಯಯನ ಮಾಡುವ ಕಾಲವೊಂದಿತ್ತು: ಮೀನಾಕ್ಷಿ ಬಾಳಿ

0
44

ಕಲಬುರಗಿ: ಕಾದಂಬರಿಗಳ ವಸ್ತುವನ್ನು ಪರಿಗಣಿಸಿ ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ದಾರ್ಶನಿಕ ಎಂದೆಲ್ಲ ವಿಭಾಗಮಾಡಿ ಅಧ್ಯಯನ ಮಾಡುವ ಕಾಲವೊಂದಿತ್ತು ಬದಲಾದ ಸಂದರ್ಭದಲ್ಲಿ ಹೇಗೆ ವಿಭಾಗ ಮಾಡಿಕೊಳ್ಳುವುದೇ ಒಂದು ಮಿತವಾಗಿ ಪರಿಣಮಿಸುತ್ತಿದೆ ಬದುಕಿನ ಯಾವೊಂದು ವಿನ್ಯಾಸವನ್ನು ಕಂಪಾಟ್ಮೆಂಟ್ ಆಗಿ ನೋಡುವ ಉಪಕ್ರಮವು ಅಷ್ಟು  ನಿಶ್ಚಿತ ಫಲಿತವನ್ನು ನೀಡದು. ಹೀಗೆ ನೋಡುವುದೇ ತನ್ನಷ್ಟಕ್ಕೆ ಕೆಲವು ಅಪಸವ್ಯಗಳನ್ನು ಕೃತಿಮಗಳನ್ನ ಬಿಟ್ಟು  ಕೊಡುತ್ತದೆ ಎಂಬ ಎಚ್ಚರದಲ್ಲಿ ಸೃಜನಶೀಲ ಕೃತಿಗಳನ್ನು ಓದುವ ಕ್ರಮ ಬರುತ್ತಿದೆ ಎಂದು ವಿ.ಜಿ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ  ವಿಭಾಗದ ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿ ಅವರು ಹೇಳಿದರು.

ನಗರದ ಸಿದ್ದಲಿಂಗೇಶ್ವರ ಬುಕ್ ಮಹಲ್ ದಲ್ಲಿ ನಡೆದ ಅಟ್ಟದ ಮೇಲೆ ಬೆಟ್ಟದಂತಹ ವಿಚಾರ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮದಲ್ಲಿ ಭಾಲಚಂದ್ರ ಜಯಶೆಟ್ಟಿ ಅವರು ರಚಿಸಿರುವ ಮೇದಾರ ಕೇತಯ್ಯ ಕಾದಂಬರಿಯನ್ನು ಕುರಿತು ಮಾತನಾಡುತ್ತಾ ೧೨ನೇ ಶತಮಾನದ ಕಾಯಕಜೀವಿಗಳ ಚಳುವಳಿಯಲ್ಲಿ ಕಾಣಿಸಿಕೊಂಡಿದ್ದ ಶರಣರೊಬ್ಬರ  ಬದುಕನ್ನು ಕೇಂದ್ರೀಕರಿಸಿಕೊಂಡು ಬರೆಯಲಾಗಿದೆ ೧೨ನೇ ಶತಮಾನದ ಶರಣರನ್ನು ಕುರಿತು ಕಾದಂಬರಿ ರಚಿಸಿದ ದೊಡ್ಡ  ಪರಂಪರೆಯೊಂದು ಕನ್ನಡದಲ್ಲಿದೆ.ಬಸವರಾಜ ಕಟ್ಟಿಮನಿ, ತಿಪ್ಪೇರುದ್ರಸ್ವಾಮಿ,  ಮಾತೆ ಮಹಾದೇವಿ,  ಬಿ.ಎಚ್ ಹನ್ನೆರಡುಮಠರ ಸಾಲಿನಲ್ಲಿ ಪ್ರೊ.ಬಾಲಚಂದ್ರ ಜಯ  ಶೆಟ್ಟಿ, ಪರಿಗಣಿಸಲ್ಪಡುತ್ತಾರೆ ಕಾದಂಬರಿ ಹೆಣೆಯುವಲ್ಲಿ ಅವರ ಶ್ರದ್ದೆ,ಮತ್ತು ಬದ್ಧತೆಗಳು ಪ್ರಶಂಸನೀಯವಾಗಿವೆ.

Contact Your\'s Advertisement; 9902492681

ಕನ್ನಡ ನಾಡಿನಲ್ಲಿ ಆದ ವಚನ ಚಳುವಳಿಯು ಜಾಗತಿಕ ಇತಿಹಾಸದಲ್ಲಿಯೇ ಅಪೂರ್ವ ಎಂಬುದು ಸರ್ವ ವಿಧಿತ ವಸ್ತು ಸಮ ಸಮಾಜದ ನಿರ್ಮಾಣಕ್ಕಾಗಿ ಅಸಂಖ್ಯ ದುಡಿಯುವ ಜನಸಮುದಾಯಗಳು ಒಂದೆಡೆಯಿಂದ ಸೇರಿಕೊಂಡು ನಡೆಸಿದ ಸಂಘರ್ಷಮಯ ವರ್ಗ, ವರ್ಣ,ಜಾತಿ,ಲಿಂಗ ಇತ್ಯಾದಿ ಅಂದು ಸ್ಥಿತವಾಗಿದ್ದ  ಅ ವೈಜ್ಞಾನಿಕ ತಾರತಮ್ಯಗಳ ವಿರುದ್ಧ ಎದ್ಧ ಆ  ಬಂಡಾಯವು ಇಂದಿನ ಪ್ರಜಾಪ್ರಭುತ್ವ ನಡೆಗಳಿಗೆ ಬೀಜ ವಾಗಿದ್ದು ಕಾಕತಾಳಿಯವೇ ನಲ್ಲ ಅದಕ್ಕೊಂದು ಸಮಾಜಶಾಸ್ತ್ರೀಯ ಬೆಳವಣಿಗೆ ಇದೆ ಅನೂಚಾನವಾಗಿ ನಡೆದುಕೊಂಡು ದಂಗೆಕೋರ ಪರಂಪರೆಯಿದೆ ಹಿಂದೆಂದಿಗಿಂತಲೂ ಇಂದು ಜನಮಾನಸವನ್ನು ವಚನ ಪರಂಪರೆಯು ಅತಿ ಹೆಚ್ಚು ಆಕರ್ಷಿಸುತ್ತಿರುವುದು ತಳಸಮುದಾಯದ ಶರಣರನ್ನು ಆಯಾ ಸಮುದಾಯಗಳು ತಮ್ಮ ಐಕನಾಗಿ ಬರ ಮಾಡಿಕೊಳ್ಳುತ್ತಿರುವುದು ಸಾವಯವ ಸಂಬಂಧವಿದೆ.

ಇದು ಜನಾಂಗೀಯ ಎಚ್ಚರದ ಕಾಲ. ಆರ್ಥಿಕವಾಗಿ ತುಳಿತಕ್ಕೆ ಒಳಗಾಗಿದ್ದ ಹಾಗೂ ಸಾಂಸ್ಕೃತಿಕವಾಗಿ ಅವನಿಗೆ ತಳ್ಳಲ್ಪಟ್ಟಿದ್ದ ಸಮುದಾಯಗಳು ಸಂವಿಧಾನದ ಸೌಲಭ್ಯಗಳಿಂದಾಗಿ ಹೊಡೆ ಮುರಿದು ಎದ್ದು ಈ ಬೆಳವಣಿಗೆಯು ಹಲವು ಮಿತಿಗಳನ್ನು ಹೊಂದಿದೆ ಎಂಬುದು ಬೇರೆ ಮಾತು ಅದು ಇನ್ನೊಂದು ಸಂವಾದವನ್ನು ಬೇಡುತ್ತದೆ ಅನೇಕ ಮಿತಿಗಳ ನಡುವೆಯೂ ಸಾಂಸ್ಕೃತಿಕ ಐಡೆಂಟಿಟಿ ಒಂದು ಮೂಡುತ್ತಿದೆ ಎಂಬುದೇ ಬಹು ಮುಖ್ಯವಾದ ಸಂಗತಿ  ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಚ್.ಟಿ.ಪೋತೆ ರವರು ಮಾತನಾಡಿ ತಳಸಮುದಾಯಗಳ ಈ ಎಚ್ಚರ ಮೊದಲಿಗೆ ರಾಜಕೀಯ ಪ್ರಜ್ಞೆ ಮೂಡುವುದರೊಂದಿಗೆ  ತನ್ನ ಸಾಂಸ್ಕೃತಿಕ ಮಹತ್ವವನ್ನು  ಇದಿ ರುಗೊಳ್ಳುತ್ತದೆ ಹೀಗಾಗಿಯೇ ಇಂದು ಅಲಕ್ಷಿತ ವಚನಕಾರರು ಮುನ್ನೆಲೆಗೆ ಬರುವುದಲ್ಲದೆ ಅವರ ವಚನಗಳು ಈ ಹಿಂದೆಯೂ ಕಂಡಷ್ಟು ಆಯಾಮಗಳಲ್ಲಿ ಚರ್ಚೆ ಗೊಳ್ಳುತ್ತಿವೆ. ಅಂತರ್ ಶಿಸ್ತೀಯ ಅಧ್ಯಯನಕ್ಕೆ ಒಳಗಾಗುತ್ತಿವೆ ಅಪೇಕ್ಷಣೀಯವೂ ಹೌದು. ಕಾದಂಬರಿಕಾರರು ಜನಸಾಮಾನ್ಯರ ಅಕ್ಷಣ್ಣ್ಯ ಜೀವನೋತ್ಸಾಹವನ್ನು ಗೌರವಿಸುವ ನಿಟ್ಟಿನಲ್ಲಿ ಕೇತಯ್ಯನವರ ಕುರಿತು ಈ ಕಾದಂಬರಿ ರಚಿಸಿದ್ದು ಸ್ವಾಗತರ್ಹ್. ೧೨ನೇ ಶತಮಾನದ ಶರಣರ ಕುರಿತು ಬರೆಯುವುದು ತಿಳಿದಷ್ಟು ಸುಲಭವಲ್ಲ ಅಪಾರ ವ್ಯವಧಾನವನ್ನು ಇದು ಬಯಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಸಾಹಿತಿ ವಸಂತ ಕುಷ್ಟಗಿ ಮಾತನಾಡಿ ಕಾದಂಬರಿಕಾರರು ಕೃತಿಗಾಗಿ ಮೇದಾರ ಸಮುದಾಯದ ಬಗ್ಗೆ ವಿವರಗಳನ್ನು ಕಲೆ ಹಾಕಿದ್ದಾರೆ ಇದು ಅವರ ಸಾಹಿತ್ಯಕ ಶಿಸ್ತನ್ನು ತೋರಿಸುತ್ತದೆ ಅವರು ಇಳಿವಯಸ್ಸಿನಲ್ಲಿಯೂ ಪಟ್ಟ ಶ್ರಮ ಅಭಿನಂದನೆಗೆ ಅರ್ಹ ಆಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ  ಬಸವರಾಜ ಕೊನೆಕ ಮಾತನಾಡಿ ಪ್ರಕಾಶನದ ವತಿಯಿಂದ ಉತ್ತಮ ಕೃತಿಗಳನ್ನು ಹೊರತರುವ ಮೂಲಕ ಪ್ರತಿಭೆಗಳಿಗೊಂದು  ಅವಕಾಶ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಯತ್ನಿಸುತಿದ್ದು ಇಲ್ಲಿ ವಿಮರ್ಶೆ ಗೊಂಡ ಪುಸ್ತಕಗಳ ಲೇಖನ ಸಂಗ್ರಹಿಸಿ   ಪುಸ್ತಕ ರೂಪದಲ್ಲಿ ಪ್ರಕಟಗೊಳಿ ಗೊಳಿಸಲಾಗುವುದು ಎಂದರು.

ಜೊತೆಗೆ ಇದರ ಲಾಭವನ್ನು ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರೂ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಚಂದ್ರ ಬಾಲ ಶೆಟ್ಟಿ,ಸುಬ್ಬರಾವ್ ಕುಲಕರ್ಣಿ, ಡಾ. ಶ್ರೀಶೈಲ್ ನಾಗರಾಳ, ಇದ್ದರು ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು, ಡಾ. ಸಿದ್ದಲಿಂಗ ದಬ್ಬಾ  ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here