ಶಹಾಬಾದ: ಎಐಡಿಎಸ್‌ಓ, ಎಐಡಿವೈಓ, ಎಐಎಮ್‌ಎಸ್‌ಎಸ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹನುಮಾನ ನಗರದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ರವರ ೧೨೪ನೇ ಜನ್ಮ ದಿನಾಚರಣೆ ಅಂಗವಾಗಿ ಹರಿವು ಸಿನಿಮಾ ಪ್ರದರ್ಶನ ಮಾಡಲಾಯಿತು.
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ, ಆವಿಷ್ಕಾರ ಪ್ರಗತಿಪರ ವೇದಿಕೆಯ ಜಿಲ್ಲಾ ಸಂಚಾಲಕರಾದ ವಿ.ಜಿ ದೇಸಾಯಿ, ಪ್ರಸಕ್ತ ಮೌಲ್ಯಗಳಿಲ್ಲದ ಸಿನಿಮಾ ಸಾಹಿತ್ಯದಿಂದ ಮಾನವನ ಸಂಬಂಧಗಳು ಯಾಂತ್ರಿಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹರಿವು ಸಿನಿಮಾವು ಮಂಜುನಾಥ ಮಂಸೋರೆ ರವರು ನಿರ್ದೇಶಿಸಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನ ಚಿಕಿತ್ಸೆಗಾಗಿ, ಇದ್ದ ಹೊಲವನ್ನು ಮಾರಿ ಬಡರೈತನೊಬ್ಬ ನಗರಕ್ಕೆ ಬರುತ್ತಾನೆ . ಮಗನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಮುಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಾಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ರ್ಟಿಕೋನದ ಸಕರಾತ್ಮಕ ಚಿತ್ರಣವೂ ಕೊನೆಯಲ್ಲಿ ತೊರಿಸಿದ್ದು ಉತ್ತಮ ಅಭಿರುಚಿ ಉಳ್ಳ ಸಿನಿಮಾ ಇದಾಗಿದೆ.ಅಲ್ಲದೇ ನೋಡುಗರಿಗೆ ಕಂಬನಿ ತರಿಸುತ್ತದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಬಾಚಿಕೊಂಡಿರುವ ಈ ಸಿನಿಮಾ ಹಾಗೂ ಇದೇ ರೀತಿ ಉತ್ತಮ ಮೌಲ್ಯಗಳನ್ನು ಹೊಂದಿರುವ ಹಲವು ಸಿನಿಮಾಗಳು ಜನಸಾಮಾನ್ಯರಿಂದ ದೂರ ಉಳಿದಿವೆ ಎಂದರು.
ಎಐಯುಟಿಯುಸಿ ಶಹಾಬಾದ ಸಂಚಾಲಕ ರಾಘವೇಂದ್ರ.ಎಮ್.ಜಿ ಇಂದಿನ ಸರಕಾರಗಳು ಮೋಬೈಲ್ ಇಂಟರ್ ನೇಟ್ ಗಳಲ್ಲಿ ಅಶ್ಲಿಲ ಸಿನಿಮಾ ಸಾಹಿತ್ಯ ಹರಿಬಿಡುತ್ತಿದು ವಿದ್ಯಾರ್ಥಿ-ಯುವಜನರ ನೈತಿಕ ಬೆನ್ನಲುಬನ್ನೆ ಮುರಿಯುತ್ತಿದ್ದಾರೆ. ಭವಿಷ್ಯದ ಯಾವುದೇ ಗುರಿ ಇಲ್ಲದ ಯುಜನರು ಜೀವನದ ಬಗ್ಗೆ ನಿರಾಶರಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಂಘಟನೆಗಳು ಉತ್ತಮ ಸಿನಿಮಾಗಳನ್ನು ತೊರಿಸುತ್ತಿರುವುದು ಶ್ಲಾಘನೆಯ ವಿಷಯ ಎಂದು ಹೇಳಿದರು.
ಎಐಡಿಎಸ್‌ಓ ಉಪಾಧ್ಯಕ್ಷ ರಮೇಶ ದೇವಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್.ಕೆ.ಎಸ್ ಜಿಲ್ಲಾಧ್ಯಕ್ಷ ಗಣಪತ್‌ರಾವ್.ಕೆ. ಮಾನೆ, ಎಐಎಮ್‌ಎಸ್‌ಎಸ್ ಜಿಲ್ಲಾಧ್ಯಕ್ಷ ಗುಂಡಮ್ಮ ಮಡಿವಾಳ, ಎಐಡಿವೈಓ ಅಧ್ಯಕ್ಷ ಸಿದ್ದು ಚೌಧರಿ, ಕಾರ್ಯದರ್ಶಿ ರಾಜೇಂದ್ರ ಅತನೂರು, ಪ್ರವೀಣ್ ಬಣವೀಕರ್ ಮಾಹಾದೇವಿ ಮಾನೆ, ರಾಧಿಕಾ ಚೌಧರಿ ಎಐಡಿಎಸ್‌ಓ ಶಹಾಬಾದ ಅಧ್ಯಕ್ಷ ತುಳಜರಾಮ.ಎನ್.ಕೆ, ರಘು ಪವರ್, ಶ್ರೀನಿವಾಸ, ತಿಮ್ಮಯ್ಯ ಮಾನೆ, ನೀಲಕಂಠ.ಎಮ್. ಹುಲಿ, ಪ್ರವೀಣ್, ಕಿರಣ್, ಅಜಯ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.