ನಗರಸಭೆಯಲ್ಲಿ ಸಂತ ಸೇವಾಲಾಲ ಜಯಂತಿ ಆಚರಣೆ

0
66

ಶಹಾಬಾದ: ಜನಸಾಮಾನ್ಯರು ಹುಟ್ಟುತ್ತಾರೆ ಮತ್ತು ಸಾಯುತ್ತಾರೆ.ಆದರೆ ಕೆಲವೊಬ್ಬರು ಮಾತ್ರ ಸಾವಿನ ನಂತರವೂ ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಿ ಹೋಗುತ್ತಾರೆ. ಅಂತವರಲ್ಲಿ ಸೇವಾಲಾಲ ಮಹಾರಾಜರು ಒಬ್ಬರು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಸೋಮವಾರ ನಗರಸಭೆಯಲ್ಲಿ ಆಯೋಜಿಸಲಾದ ಸಂತ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸೇವಾಲಾಲ ಮಹಾರಾಜರು ಬಂಜಾರಾ ಸಮಾಜದ ಏಳಿಗೆಗೆ ಶ್ರಮಪಟ್ಟ ಬಂಜಾರಾ ಸಮಾಜದ ಗುರುಗಳು.ಇಂದು ಬಂಜಾರಾ ಸಮಾಜ ಸಂಘಟಿತವಾಗಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು.ಬಂಜಾರಾ ಸಮಾಜ ಆರ್ಥಿಕವಾಗಿ,ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಗೊಳ್ಳಬೇಕಾಗಿದೆ. ಆದ್ದರಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಒದಗಿಸುವ ಅಗತ್ಯವಿದೆ ಎಂದರು.

ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಮಾತನಾಡಿ, ದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಜನಸಂಖ್ಯೆ ಹೊಂದಿದ ಬಂಜಾರಾ ಸಮಾಜದ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೇ ಸೇವಾಲಾಲರ ತತ್ವಗಳನ್ನು ಆಲಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ, ನಗರಸಭೆಯ ಸದಸ್ಯರಾದ ರವಿ ರಾಠೋಡ,ಸಾಬೇರಾಬೇಗಂ, ಪಾರ್ವತಿ ಪವಾರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರ ಚವ್ಹಾಣ, ಶರಣು ಪಗಲಾಪೂರ್, ಡಾ.ರಶೀದ್ ಮರ್ಚಂಟ್,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಸೇರಿದಂತೆ ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here