ಜನಪದ ಸಾಹಿತ್ಯ ಸಹಜ ಹುಟ್ಟುವ ಸಾಹಿತ್ಯ: ಡಾ.ರಾಜೇಂದ್ರ ಯರನಾಳೆ

0
56

ಕಲಬುರಗಿ : ಜನಪದ ಸಾಹಿತ್ಯವು ಸಹಜವಾಗಿ ಆಡುಮಾತಿನಿಂದ ಬರುವ ಸಾಹಿತ್ಯವಾಗಿದೆ ಎಂದು ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯರಾದ ಡಾ.ರಾಜೇಂದ್ರ ಯರನಾಳೆ ಅಭಿಪ್ರಾಯಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜನಪದ ಅಧ್ಯಯನ ಕೇಂದ್ರ ಮತ್ತು ಸಂಗೀತ ವಿಭಾಗದ ಸಹಭಾಗಿತ್ವದಲ್ಲಿ ಕಲ್ಯಾಣ ಕರ್ನಾಟಕದ ಜನಪದ ಸಂಗೀತ ಮತ್ತು ಕಲೆಗಳು ಎನ್ನುವ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜನರಿಂದ ಜನರಿಗೆ ಹರಿದುಬರುವ ಪದಗಳೇ ಜಾನಪದವಾಗಿವೆ. ಜನಪದ ಸಾಹಿತ್ಯ ಪ್ರಮಾಣಿಕ ಸಾಹಿತ್ಯವಾಗಿದೆ. ಬೇರೆ ಸಾಹಿತ್ಯಕ್ಕಿಂತ ಈ ಸಾಹಿತ್ಯ ವಿಶೇಷವಾಗಿದೆ. ಇದು ಶಿಷ್ಟ ಸಾಹಿತ್ಯದ ರಚನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜನಪದ ಸಾಹಿತ್ಯವನ್ನು ಯುವ ಪೀಳಿಗೆ ಮರೆತು ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಮಾಡಿದಾಗ ಇನ್ನು ಜೀವಂತವಾಗಿಡಲು ಸಾಧ್ಯವಾಗುತ್ತದೆ, ಜನಪದ ಸಾಹಿತ್ಯವನ್ನು ಸಂಗ್ರಹಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇನ್ನೂ ಹಳ್ಳಿಗಳಲ್ಲಿ ಜನಪದ ಜೀವಂತವಾಗಿದೆ ಎಂದು ಹೇಳಿದರು. ತಮ್ಮ ಭಾಷಣದದ್ದುಕ್ಕೂ ಅನೇಕ ಜನಪದ ಹಾಡುಗಳನ್ನು ಹೇಳುತ್ತಾ ಮಾತನಾಡಿದರು.

ಪಂಚಮಸಾಲಿ ಸಮುದಾಯ 2ಎಗೆ ಸೇರಿಸುವುದಕ್ಕೆ ವಿರೋಧಸಿಲ್ಲ: ಸಚಿವ ಜಗದೀಶ್ ಶೆಟ್ಟರ

ಬೀದರನ ಜನಪದ ಕಲಾವಿದರಾದ ಶಂಭುಲಿಂಗ ವಾಲದೊಡ್ಡಿಯವರು ಆಶಯನುಡಿಗಳನ್ನಾಡುತ್ತಾ, ಜನಪದ ಸಾಹಿತ್ಯ ವಿಭಿನ್ನ ಶೈಲಿಯ ಸಾಹಿತ್ಯವಾಗಿದೆ, ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಹಾಡುಗಳು ಅತ್ಯಂತ ವೈವಿಧ್ಯಮಯವಾಗಿದೆ ಎಂದು ಅನೇಕ ಜನಪದ ಹಾಡುಗಳನ್ನು ಹಾಡುವುದರ ಮೂಲಕ ಜನಪದ ಸಾಹಿತ್ಯಲೋಕಕ್ಕೆ ತೆಗೆದುಕೊಂಡು ಹೋದರು.

ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಜನಪದ ಸಾಹಿತ್ಯದ ಪ್ರಥಮ ಸಾಹಿತಿಯಾಗಿದ್ದಾಳೆ. ಮಹಾದಾಸೋಹಿ ಶರಣಬಸವೇಶ್ವರರು ಜನಪದ ದೇವರಾಗಿದ್ದರು. ಈ ಭಾಗದಲ್ಲಿ ಜನಪದ ಸಾಹಿತ್ಯಕ್ಕೆ ಶರಣಬಸವೇಶ್ವರ ಸಂಸ್ಥಾನ ಯಾವಾಗಲೂ ಆದ್ಯತೆ ನೀಡುತ್ತಾ ಬಂದಿದೆ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರು ಜನಪದ ಸಾಹಿತ್ಯ ಬೆಳೆಸುತ್ತಿದ್ದಾರೆ. ಜನಪದ ಸಾಹಿತ್ಯವನ್ನು ಯುವ ಜನತೆ ತಿಳಿದುಕೊಳ್ಳಬೇಕು ಸಲಹೆ ನೀಡಿದರು.

ದಿಶಾ ರವಿ ಬಂಧನ ಖಂಡಿ ನ್ಯಾಯಲಯದ ಮುಂದೆ ಮೌನ ಪ್ರತಿಭಟನೆ

ಮಹಾವಿದ್ಯಾಲಯ ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕಿ ಡಾ.ಇಂದಿರಾ ಶೆಟಕಾರ ವೇದಿಕೆ ಮೇಲಿದ್ದರು. ಮಹಾವಿದ್ಯಾಲಯ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಡಾ.ಸಿದ್ದಮ್ಮ ಗುಡೇದ್ ಅತಿಥಿ ಪರಿಚಯಸಿದರು, ಜಾನಕಿ ಹೊಸುರ ವಂದಿಸಿದರು. ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಡಾ.ಸೀಮಾ ಪಾಟೀಲ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ವೃದ್ಯಾಪ್ಯದಲ್ಲಿ ಆರೋಗ್ಯ ರಕ್ಷಣೆ ಅತಿ ಮುಖ್ಯ: ಉಪಳಾಂವಕರ್

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಂಗೀತಾ ಪಾಟೀಲ, ಕೃಪಾಸಾಗರ ಗೊಬ್ಬುರ, ಅನಿತಾ ಗೊಬ್ಬುರ, ಪದ್ಮಜಾ ವೀರಶೆಟ್ಟಿ, ದಾಕ್ಷಾಯಣಿ ಜಿ.ಕಾಡಾದಿ, ಗೌರಮ್ಮ, ವಿಜಯಲಕ್ಷ್ಮೀ, ಶಿಕ್ಷಕೇತರ ಸಿಬ್ಬಂದಿ ವರ್ಗದವರಾದ ವಿನೋದಕುಮಾರ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ್ ಬಿರಾದಾರ, ವಿದ್ಯಾ ರೇಷ್ಮಿ, ಅನುಸೂಯಾ ಬಡಿಗೇರ, ಶಶೀಕಲಾ ಪಾರಾ, ಪ್ರಭಾವತಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ನಂತರ ಗೋಷ್ಠಿಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here