ಬೆಂಗಳೂರು: ಬೆಳಗಾವಿಯ ಕಿತ್ತೂರು ತಾಲೂಕಿನಲ್ಲಿ ಪತ್ರಕರ್ತ ಬಸವರಾಜು ಪಾಟೀಲ್ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.
ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು, ಮುಂದೆ ಇಂಥ ಕೃತ್ಯಗಳು ನಡೆಯಬಾರದು ಎಂದು ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಶಿವಕುಮಾರ್ ನಾಗರನವಿಲೆ ಖಂಡಿಸಿದರು. ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕಾನೂನು ರೂಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರಮೇಶ್, ಪತ್ರಕರ್ತರಾದ ಕ್ರಾಂತಿ ರಾಜು, ಸೋಮೇಶ ನವೋದಯ, ನವೀನ್,ಮಹಾಂತೇಶ,ಹೇಮಂತ್ ಹಾಗೂ ಚಲನಚಿತ್ರ ನಿರ್ದೇಶಕರಾದ ರವಿವರ್ಮ,ಎಂ ಸಂಜಯ್ ದೊಡ್ಡ ಕಾಡನೂರು ಪತ್ರಕರ್ತ,ಚಲನಚಿತ್ರ ನಿರ್ದೇಶಕರು, ಚಲನಚಿತ್ರ ಸ್ಥಿರ ಛಾಯಾಗ್ರಾಹಕರಾದ ವೆಂಕಟೇಶ್,ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಸದಸ್ಯರಾದ ಮಂಜಮ್ಮ, ಕಲ್ಪನಾ,ರತ್ನ ಹಾಗಲವಾಡಿ ಇತರರು ಉಪಸ್ಥಿತರಿದ್ದರು.