ಮುಖ್ಯಮಂತ್ರಿಗೆ ಮಾದಿಗ ಯುವ ಸೇನೆಯಿಂದ ಘೇರಾವ:ನಂದಕುಮಾರ ಕನ್ನಳ್ಳಿ

0
94

ಸುರಪುರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಮಿಯವರು ಹಿಂದೆ ೨೦೧೮ರ ಅಕ್ಟೋಬರ್ ೧೦ ರಂದು ನಡೆದ ದುಂಡು ಮೇಜಿನ ಸಭೆಯಲ್ಲಿ ಎ.ಜೆ.ಸದಾಶೀವ ಆಯೋಗದ ವರದಿ ಜಾರಿ ಕುರಿತು ನೀಡಿದ ಭರವಸೆಯನ್ನು ಮರೆತಿದ್ದಾರೆ,ಆದ್ದರಿಂದ ಚಂಡ್ರಕಿ ಗ್ರಾಮದಲ್ಲಿ ಈ ತಿಂಗಳ ೨೧ನೇ ತಾರೀಖು ನಡೆಯುವ ಮುಖ್ಯಮಂತ್ರಿಗಳ ಗ್ರಾಮ ವಾಸ್ತ್ಯವದ ಸಂದರ್ಭದಲ್ಲಿ ಮಾದಿಗ ಯುವ ಸೇನೆಯಿಂದ ಘೇರಾವ್ ಹಾಕುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು,ರಾಜ್ಯದಲ್ಲಿರುವ ಮಾದಿಗ ಸಮುದಾಯ ಪರಿಶಿಷ್ಟ ಜಾತಿಗಳಲ್ಲೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದೆ,ಆದರೆ ಮಾದಿಗ ಸಮುದಾಯದ ಜನಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಸೌಲಭ್ಯಗಳ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ,ಆದ್ದರಿಂದ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಹಿಂದಿನಿಂದಲೂ ಮನವಿ ಮಾಡುತ್ತಿದ್ದರು ಪ್ರಯೋಜನೆಯಾಗುತ್ತಿಲ್ಲ.

Contact Your\'s Advertisement; 9902492681

ಈಗಾಗಲೆ ನಮ್ಮ ಮನವಿಗೆ ಸ್ಪಂಧಿಸದ ಹಿಂದಿನ ಸರಕಾರದ ಸಚಿವರಾಗಿದ್ದ ಹೆಚ್.ಆಚಿಜನೆಯರ ವಿರುಧ್ಧ ರಾಜಕೀಯ ನಿರ್ಣಯ ಕೈಗೊಳ್ಳಲಾಗಿತ್ತು,ಈಗ ಸಚಿವರಾಗಿರುವ ಪ್ರಯಾಂಕ್ ಖರ್ಗೆಯವರ ವಿರುಧ್ದವು ರಾಜಕೀಯ ನಿರ್ಣಯ ಕೈಗೊಳ್ಳಬೇಕಾಗುವುದು.ಆದ್ದರಿಂದ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಇದರ ಕುರಿತು ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಪ್ರಿಯಾಂಕ ಖರ್ಗೆಯವರಿಗು ಮನವಿ ಮಾಡಿದ್ದು,ಅವರು ನೀಡಿದ ಭರವಸೆ ಹುಸಿಯಾಗಿದೆ ಆದ್ದರಿಂದ ಅವರ ನಿರ್ಲಕ್ಷ್ಯವನ್ನು ಖಂಡಿಸುತ್ತೆವೆ ಹಾಗು ಮುಖ್ಯಮಂತ್ರಿಗಳು ಕೂಡಲೆ ಕೇಂದ್ರಕ್ಕೆ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here