ಸುರಪುರ: ನಗರದ ಬೋಯಿಗಲ್ಲಿಯ ನಿಜಶರಣ ಅಂಬಿಗರ ಚೌಡಯ್ಯ ಭವನ ಕಾಮಗಾರಿ ಕಳೆದ ೯ ವರ್ಷಗಳಿಂದ ಮುಗಿಯದೇ ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಸ್ಥಗಿತಗೊಳ್ಳಲು ಕಾರಣೀಭೂತರಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ (ಲ್ಯಾಂಡ್ ಆರ್ಮಿ) ಮೂರು ಜನ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕೋಲಿ ಗಂಗಾಮತಸ್ಥರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ ಆಗ್ರಹಿಸಿದ್ದಾರೆ.
2010ರಲ್ಲಿ ಪ್ರಾರಂಭಗೊಂಡಿದ್ದ ಈ ಕಟ್ಟಡದ ಕಾಮಗಾರಿಯು ಇಲ್ಲಿಯವರೆಗ ಫೌಂಡೇಷನ್ ಹಂತದಲ್ಲಿದ್ದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಈ ಕುರಿತು ಸಂಬಂಧಪಟ್ಟ ನಿಗಮದ ಕಚೇರಿಯನ್ನು ಮಾಹಿತಿ ಪಡೆದುಕೊಂಡಾಗ ಈ ಕಟ್ಟಡ ಕಾಮಗಾರಿಯು 50 ಕೋಟಿ ರೂ ಅನುದಾನದಲ್ಲಿ 14 ಲಕ್ಷ ರೂ ಅನುದಾನ ಕೇಂದ್ರ ಕಚೇರಿಗೆ ಜಮ ಮಾಡಲಾಗಿದ್ದು 10 ಲಕ್ಷ ರೂ ಅನುದಾನವನ್ನು ಕೇಂದ್ರ ಕಚೇರಿಯಿಂದ ಬಿಡುಗಡೆಗೊಳಿಸಲಾಗಿದ್ದು 4.82 ಲಕ್ಷ ರೂ ಕಾಮಗಾರಿಗೆ ವಹಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದು ಈ ಭವನಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿರುವುದು ತಿಳಿದು ಬಂದಿದ್ದು ಕೂಡಲೇ ಕಾಮಗಾರಿಯು ನೆನೆಗುದಿಗೆ ಬೀಳಲು ಕಾರಣೀಭೂತರಾದ ಹಾಗೂ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿದ ಲ್ಯಾಂಡ್ ಆರ್ಮಿ 3 ಜನ ಇಂಜಿನಿಯರ್‌ಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಮತ್ತು ಸ್ಥಗಿತಗೊಳಿಸಿರುವ ಭವನದ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ತಿಗೊಳಿಸಬೇಕು ಎಂದು ಅವರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.