ನಗರೋತ್ಥಾನ ಯೋಜನೆಯ ಕಾಮಗಾರಿಗಳು ಕಳಪೆ ಮತ್ತು ಅವೈಜ್ಞಾನಿಕ

0
34

ಶಹಾಬಾದ: ನಗರಸಭೆಯ ವ್ಯಾಪ್ತಿಯಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ನಗರೋತ್ಥಾನ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟ, ಅವೈಜ್ಞಾನಿಕ ಮತ್ತು ಕ್ರೀಯಾಯೋಜನೆ ಪ್ರಕಾರ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳಲ್ಳು ಮುಂದಾಗುತ್ತಿಲ್ಲ.

ನಗರೋತ್ಥಾನ ಮೂರನೇ ಹಂತದ ಯೋಜನೆಯಲ್ಲಿ ೨೦ ಕೋಟಿ ಅನುದಾನದಲ್ಲಿ ರಸ್ತೆ. ಚರಂಡಿ, ಸೇತುವೆ ನಿರ್ಮಾಣ ಮಾಡಲು ಸುಮಾರು ಎರಡು ವರ್ಷದಿಂದ ಗುತ್ತಿಗೆದಾರರು ಹರಸಾಹಸ ಮಾಡುತ್ತಿದ್ದಾರೆ. ಅಲ್ಲದೇ ಇವರ ಕಳಪೆ ಕಾಮಗಾರಿ, ಅವೈಜ್ಞಾನಿಕ ಕಾಮಗಾರಿಯಿಂದ ನಗರದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದರಿಂದ ಗುತ್ತಿಗೆದಾರರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದಕ್ಕೆ ನಗರದಲ್ಲಿ ನಡೆದಿರುವ ಅನೇಕ ಕಾಮಗಾರಿಗಳೇ ಸಾಕ್ಷಿ.

Contact Your\'s Advertisement; 9902492681

ವಿದ್ಯಾರ್ಥಿಗಳು ಎಸ್.ಎಸ್.ಪಿ. ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಕಡ್ಡಾಯ

ಕಳಪೆ ಮತ್ತು ಅವೈಜ್ಞಾನಿಕ ಸೇತುವೆ ನಿರ್ಮಾಣ: ಈಗಾಗಲೇ ಒಂದುವರೆ ವರ್ಷದ ಹಿಂದೆ ನಗರದ ಮಧ್ಯ ಭಾಗದಲ್ಲಿರುವ ಅಜನಿ ಹಳ್ಳಕ್ಕೆ ನಗರೋತ್ಥಾನ ಯೋಜನೆಯಡಿ ಸುಮಾರು ೨ ಕೋಟಿ ಅನುದಾನ ಸೇತುವೆ ನಿರ್ಮಾಣ ಮಾಡಲಾಗಿದೆ.ಆದರೆ ಅದು ಅವೈಜ್ಞಾನಿಕದಿಂದ ಕೂಡಿದೆ ಎನ್ನುವುದಕ್ಕೆ ಸೇತುವೆ ನೋಡಿದರೇ ಸಾಮನ್ಯ ವ್ಯಕ್ತಿಯೂ ಹೇಳಬಲ್ಲ.ಆದರೆ ನಗರಸಭೆಯ ಜೆಇ, ಎಇಇ, ಡಿಯುಡಿಸಿಯ ಜೆಇ, ಎಇಇ ಹಾಗೂ ಮೂರನೇ ಹಾಘೂ ನಾಲ್ಕನೇ ತಪಾಸಣಾ ವ್ಯಕ್ತಿಗಳು ನೋಡದಿರುವುದು ದುರ್ದೈವದ ಸಂಗತಿ.

ಕ್ರೀಯಾಯೋಜನೆ ಪ್ರಕಾರ ಹಳೆ ಸೇತುವೆ ಬೀಳಿಸಿ, ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವುದಾಗಿತ್ತು.ಆದರೆ ಆ ರೀತಿ ಮಾಡದೇ, ಹಳೆ ಸೇತುವೆ ಬೀಳಿಸದೇ, ಅದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಸೇತುವೆ ಮೇಲೆ ಸಂಚರಿಸಬೇಕಾದರೆ ಹಾವಿನಂತೆ ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಯಾವುದೇ ಸೇತುವೆ ಮೇಲೆ ಹೋಗಬೇಕಾದ ಸಂದರ್ಭದಲ್ಲಿ ರಸ್ತೆ ನೇರವಾಗಿಲ್ಲ.ಅಲ್ಲದೇ ಸೇತುವೆಯ ಮೇಲ್ಭಾಗದ ರಸ್ತೆ ಕಿತ್ತು ಹೋಗಿದೆ.ರಸ್ತೆಯು ಸೀಳಿಕೊಂಡು ಬೀಳುವ ಸ್ಥಿತಿಯಲ್ಲಿದೆ.ಯಾವಾಗ ಅಪಾಯವಾಗುತ್ತದೆ.ಯಾರ ಜೀವ ತೆಗೆದುಕೊಳ್ಳುತ್ತದೆ ಎಂಬ ಭಯ ಸಾರ್ವಜನಿಕರಲ್ಲಿ ಮನೆ ಮಾಡಿದೆ.ಆದರೂ ಒಂದು ವರ್ಷದಿಂದ ಜನರು ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.

ಸುರಪುರ:ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಮೇವು ಭಸ್ಮ

ಕಳಪೆ ರಸ್ತೆ : ಬಸವೇಶ್ವರ ನಗರದಿಂದ ಮರಗೋಳ ಕಾಲೇಜಿನ ಡಾಂಬರೀಕರಣ ರಸ್ತೆ ಪೂರ್ಣಗೊಳ್ಳುವ ಮೊದಲೇ ಕಳಪೆ ಕಾಮಗಾರಿಯಿಂದ ಸಂಪೂರ್ಣ ಹಾಳಾಗಿ ಹೋಗಿತ್ತು.ಇದರಿಂದ ರಸ್ತೆಯ ತುಂಬ ತಗ್ಗುಗಳು ಮೂಡಿದ್ದವು.ಆದರೆ ಅದಕ್ಕೆ ಹೆಚ್ಚಿನ ಅನುದಾನದ ಅನುಮೋದನೆ ಪಡೆದು ಮತ್ತೆ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.ಸದ್ಯ ಆ ಕಾಮಗಾರಿiಮೆ ಗತಿಯಲ್ಲಿ ನಡೆಯುತ್ತಿದೆ. ನಗರದ ವಿವಿಧ ವಾರ್ಡಗಳಲ್ಲಿ ಹಳೆ ಚರಂಡಿಗಳನ್ನು ಕೆಡವಿ ಹೋಗಿ ವರ್ಷಗಳಾಗಿವೆ.ಆ ಕಾಮಗಾರಿಯೂ ಮಾಡುತ್ತಿಲ್ಲ.ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಬಡಾವಣೆಯ ಜನರು ಒತ್ತಾಯಿಸುತ್ತಿದ್ದಾರೆ.

ಗುತ್ತಿಗೆದಾರ ಯಾರು ಗೊತ್ತಿಲ್ಲ: ವಿಪರ್ಯಾಸದ ಸಂಗತಿಯೆಂದರೆ ನಗರೋತ್ಥಾನ ಮೂರನೇ ಹಂತದ ಕಾಮಗಾರಿಯ ಟೆಂಡರ್ ಪಡೆದ ಮುಖ್ಯ ಗುತ್ತಿಗೆದಾರ ಯಾರೆಂಬುದು ಇಲ್ಲಿಯವರೆಗೆ ನಗರಸಭೆಯ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ.ಅಲ್ಲದೇ ಕಳಪೆ ರಸ್ತೆ, ಚರಂಡಿ, ಡಿವೈಡರ್ ನಿರ್ಮಾಣ ನೋಡಿದರೇ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕು.ಆದರೆ ಕ್ರಮಕೈಗೊಂಡಿಲ್ಲ.ಕಾಮಗಾರಿ ಅರ್ಧಂಬರ್ಧ ಮಾಡಿ ವರ್ಷಗಟ್ಟಲೇ ಬಿಟ್ಟು ಹೋಗುವುದು ನಡೆದಿದೆ.ಗುತ್ತಿಗೆದಾರ ಮುಖವೇ ನೋಡಿಲ್ಲ ಎಂದು ಅಧಿಕಾರಿಗಳೇ ಸ್ವತಃ ಒಪ್ಪಿಕೊಳ್ಳುತ್ತಿದ್ದಾರೆ.ಶಹಾಪೂರ ಮೂಲದ ತಿರುಪತಿ ಎಂಬ ಉಪ ಗುತ್ತಿಗೆದಾರ ಮಾತ್ರ ಬಂದು ಹೋಗುತ್ತಿದ್ದಾರೆ.ಕಾಮಗಾರಿ ಮಾತ್ರ ಹೇಳುಕೊಳ್ಳುವಂತಿಲ್ಲ.ಕಳಪೆ ಕಾಮಗಾರಿಗೆ ಇಲ್ಲಿಯವರೆಗೆ ಕ್ರಮವಿಲ್ಲ.ಇದು ಅಧಿಕಾರಿಗಳ ಕಾರ್ಯವೈಖರಿ ತೋರಿಸುತ್ತಿದೆ.

ಜಿಲ್ಲಾಧಿಕಾರಿಗಳೇ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿಗಳು ನಗರಕ್ಕೆ ಬೇಟಿ ನೀಡಿ, ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಸಾಕಷ್ಟು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಸಾಕಷ್ಟು ಕಳಪೆ ಕಾಮಗಾರಿ ಮಾಡಿದ್ದಾರೆ.ಅದನ್ನು ಪರಿಶೀಲಿಸಿ ಮೊದಲು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು.ಗುತ್ತಿಗೆದಾರರ ಬಿಲ್ ತಡೆ ಹಿಡಿಯಬೇಕು. – ಲೋಹಿತ್ ಕಟ್ಟಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ.

ಮುಖ್ಯ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಸೇತುವೆ ಕಾಮಗಾರಿ ನೋಡಿದರೇ ಯಾವ ಅಧಿಕಾರಿಯೂ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬಹುದು. ಸಂಬಂಧಪಟ್ಟ ಜೆಇ, ಎಇಇ ಅವರು ಹಳೆ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ಮಾಡುವಾಗ ಏನು ಮಾಡುತ್ತಿದ್ದರು.ಅದಕ್ಕೆ ಅಧಿಕಾರಿಗಳೇ ಹೊಣೆಯಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.ಆದರೆ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮತೆಗೆದುಕೊಳ್ಳುತ್ತಿಲ್ಲ.ಕೂಡಲೇ ಈ ಬಗ್ಗೆ ತುರ್ತಾಗಿ ಮುಖ್ಯ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು. – ಕುಮಾರ ಚವ್ಹಾಣ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here